ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧದ 4 ಬೇನಾಮಿ ಆಸ್ತಿ ಪ್ರಕರಣ ರದ್ದುಗೊಳಿಸಿದ ಕೋರ್ಟ್

Update: 2022-12-07 17:01 GMT

ಬೆಂಗಳೂರು, ಡಿ.7: ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧ ದಾಖಲಾಗಿದ್ದ ನಾಲ್ಕು ಬೇನಾಮಿ ಆಸ್ತಿ ಪ್ರಕರಣಗಳನ್ನು ಬೆಂಗಳೂರಿನ 47ನೆ ಹೆಚ್ಚುವರಿ ಸಿಟಿ ಸಿವಿಲ್ ಆಂಡ್ ಸೆಷನ್ಸ್ ಕೋರ್ಟ್ ರದ್ದುಗೊಳಿಸಿದೆ.   

ಗಣಪತಿ ಡೀಲ್ಕಾಮ್ ಪ್ರೈವೇಟ್ ಲಿಮಿಟೆಡ್ ಕೇಸ್‍ನಲ್ಲಿ ಸುಪ್ರೀಂಕೋರ್ಟ್‍ನಿಂದ ಬಂದಿದ್ದ ಆದೇಶವನ್ನೇ ಮುಂದಿಟ್ಟುಕೊಂಡು, ಜನಾರ್ದನರೆಡ್ಡಿ ವಿರುದ್ಧದ ನಾಲ್ಕು ಬೇನಾಮಿ ಆಸ್ತಿ ಪ್ರಕರಣಗಳನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಚಂದ್ರಕಲಾ ಅವರು ರದ್ದುಗೊಳಿಸಿ ಆದೇಶಿಸಿದ್ದಾರೆ.

2009ರಲ್ಲಿ ಬೇನಾಮಿ ಆಸ್ತಿ ಗಳಿಕೆ ಮಾಡಿದ ಆರೋಪ ಮೇರೆಗೆ ಐಟಿ ಇಲಾಖೆಯಲ್ಲಿ ಜನಾರ್ದನರೆಡ್ಡಿ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳು, 2021ರಲ್ಲಿ ಆದಾಯ ತೆರಿಗೆ ಇಲಾಖೆ ಕೇಸ್ ದಾಖಲಿಸಿತ್ತು. ಆದರೆ, 2016ರ ಕಾಯ್ದೆಯನ್ನು 2009ರ ಕೃತ್ಯಕ್ಕೆ ಪೂರ್ವಾನ್ವಯಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಬೇನಾಮಿ ಆಸ್ತಿ ಪ್ರಕರಣಗಳನ್ನು ರದ್ದುಗೊಳಿಸಿ ಆದೇಶಿಸಿದೆ.

ಓಬಳಾಪುರಂ ಮೈನಿಂಗ್ ಸೇರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಸೇರಿ ಹಲವರನ್ನು ಸಿಬಿಐ 2011ರ ಸೆ.5ರಂದು ಬಂಧಿಸಿತ್ತು. ನಂತರ ರೆಡ್ಡಿಗೆ 2015ರ ಜ.21ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ, ಕೋರ್ಟ್ ಅನುಮತಿ ಇಲ್ಲದೇ ಬಳ್ಳಾರಿ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಆ ಷರತ್ತು ಈಗಲೂ ಮುಂದುವರಿದಿದೆ.   

  

     

Similar News