ಡಾ. ವನಿತಾ ತೊರ್ವಿಗೆ ʼಜಾಗತಿಕ ಮಾನವ ಹಕ್ಕುಗಳ ರಕ್ಷಣೆʼ ಪ್ರಶಸ್ತಿ

Update: 2022-12-07 18:45 GMT

ಬಿಜಾಪುರ, ಡಿ. 7: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪ್ರಚಾರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಡಾ. ವನಿತಾ ಎನ್. ತೊರ್ವಿ (Dr. Vanita N Torvi) ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ರೈಟ್ಸ್ ನೀಡುವ 2022ರ ‘ಜಾಗತಿಕ ಮಾನವ ಹಕ್ಕುಗಳ ರಕ್ಷಣೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.‌

ಜನಪ್ರಿಯ ಮಕ್ಕಳ ಹಾಗೂ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಡಾ. ವನಿತಾ ತೊರ್ವಿ ಅವರಿಗೆ ಬಿಜಾಪುರ ಜಿಲ್ಲೆ 2018ರಲ್ಲಿ ‘ಶರಣ ಕಾಯಕದ ಸತ್ಯಕ್ಕ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ವೀಕ್ಷಣಾ ಸಂಸ್ಥೆ 2022 ಜುಲೈಯಲ್ಲಿ ಡಾ. ವನಿತಾ ತೊರ್ವಿ ಅವರನ್ನು ‘ಮಕ್ಕಳ ಹಕ್ಕುಗಳ ಜಾಗತಿಕ ರಾಯಭಾರಿ’ಯಾಗಿ ನಾಮನಿರ್ದೇಶನ ಮಾಡಿತ್ತು.

ಜನಪ್ರಿಯ ಶಿಕ್ಷಣ ತಜ್ಞೆ, ಸಮಾಜ ಸೇವಕಿ ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರ್ತಿಯಾಗಿರುವ ಡಾ. ವನಿತಾ ತೊರ್ವಿ ಅವರ ಕ್ರಿಯಾತ್ಮಕ ನಾಯಕತ್ವ ದುರ್ಬಲರಲ್ಲಿ ಸಾಮಾಜಿಕ ಸುಧಾರಣೆ ತರಲು ಕಾರಣವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಮಕ್ಕಳು, ಯುವ ಜನರು, ಮಹಿಳೆಯರು ಹಾಗೂ ಕುಟುಂಬಗಳಿಗೆ ಬೆಂಬಲ ಹಾಗೂ ಮಾರ್ಗದರ್ಶಿಯಾಗಿ ಅವರು ಸುಮಾರು 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

Similar News