ಈಶ್ವರ ಖಂಡ್ರೆ ಟ್ವಿಟರ್ ನಲ್ಲಿ ಬಿಜೆಪಿ ಸಂಭ್ರಮಾಚರಣೆಯ ಪೋಸ್ಟ್; ಖಾತೆ ಹ್ಯಾಕ್ ಆಗಿದೆ ಎಂದ ಕಾಂಗ್ರೆಸ್ ಶಾಸಕ

Update: 2022-12-10 12:47 GMT

ಬೀದರ್, ಡಿ.8: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಭಾಲ್ಕಿ ವಿಧಾನಸಭೆ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಟ್ವಿಟರ್ ಖಾತೆ  ಹ್ಯಾಕ್ ಆಗಿರುವ ಬಗ್ಗೆ ಸೈಬರ್ ಕ್ರೈಂ ನಲ್ಲಿ ದೂರು ಸಲ್ಲಿಕೆಯಾಗಿದೆ.  

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಈಶ್ವರ ಖಂಡ್ರೆ, 'ನನ್ನ ಟ್ವಿಟರ್ ಖಾತೆ ಕೆಲ ಕಿಡಿಗೇಡಿಗಳಿಂದ ಹ್ಯಾಕ್ ಆಗಿದ್ದು ಕೆಲ ತಪ್ಪುಗಳು ನಡೆದಿವೆ, ಇದರ ವಿರುದ್ಧ ಸೈಬರ್ ಕ್ರೈಂ ನಲ್ಲಿ ದೂರು ನೀಡಲಾಗಿದೆ' ಎಂದು ತಿಳಿಸಿದ್ದಾರೆ. 

'ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗಲುವಿನ  ಹಿನ್ನೆಲೆ ಚಿಂಚೋಳಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು' ಎಂಬ ಟ್ವೀಟ್ ಶಾಸಕ ಈಶ್ವರ ಖಂಡ್ರೆ ಅವರ ಖಾತೆಯಲ್ಲಿ ಕಂಡು ಬಂದಿತ್ತೆನ್ನಲಾಗಿದ್ದು, ಈ ವಿಚಾರವನ್ನು ಕಾಂಗ್ರೆಸ್ ನಾಯಕರು ಮತ್ತು ಹಲವು ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ. 

Similar News