ಸಾಲ ಮಂಜೂರು ಮಾಡಲು ರೈತನಿಂದ ಲಂಚ ಪಡೆದ ಬ್ಯಾಂಕ್ ಮ್ಯಾನೇಜರ್ ಗೆ ಕೋರ್ಟ್‍ನಿಂದ 2 ವರ್ಷ ಜೈಲು ಶಿಕ್ಷೆ

Update: 2022-12-08 12:50 GMT

ಬೆಂಗಳೂರು, ಡಿ.8: ಸಾಲ ಮಂಜೂರು ಮಾಡಲು ರೈತನಿಂದ ಲಂಚ ಪಡೆದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.  

ಬಾಗೇಪಲ್ಲಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿ ಎನ್.ಶ್ರೀಧರ್ ಶಿಕ್ಷೆಗೊಳಗಾದವರು. ಸಾಲ ನೀಡಲು ರೈತ ರವಿ ಎಂಬುವರಿಗೆ ಲಂಚದ ಬೇಡಿಕೆ ಇಟ್ಟಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. 

ಒಂದು ಲಕ್ಷ ರೂ.ಸಾಲ ಮಂಜೂರು ಮಾಡಲು ಏಳು ಸಾವಿರ ರೂ.ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ರವಿ ಎಂಬುವವರು ಲೋಕಾಯುಕ್ತ ಪೊಲೀಸರಿಗೆ 2012ರಲ್ಲಿ ದೂರು ನೀಡಿದ್ದರು. ಬಳಿಕ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿತ್ತು. ಬ್ಯಾಂಕ್ ಅಧಿಕಾರಿಯಾಗಿದ್ದರಿಂದ ಸಿಬಿಐಗೆ ಪ್ರಕರಣ ವರ್ಗಾವಣೆಯಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು.  

Similar News