ಕೊಡಗಿನ ಯೋಧ ಜಾರ್ಖಂಡ್‍ನಲ್ಲಿ ಮೃತ್ಯು

Update: 2022-12-08 15:07 GMT

ಮಡಿಕೇರಿ,ಡಿ.8: ಕಡಗದಾಳು ನಿವಾಸಿ ರಾಜಮ್ಮ ಎಂಬವರ ಪುತ್ರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೆ.ಕೆ.ಶಿಜು(48) ಅವರು  ಜಾರ್ಖಂಡ್‍ನ ರಾಂಚಿಯಲ್ಲಿ ಮೃತಪಟ್ಟಿದ್ದಾರೆ.

ಕಳೆದ 23 ವರ್ಷಗಳಿಂದ ಸಿಐಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಜು ಅವರು ಕಳೆದೆರಡು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಗುರುವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಯೋಧ ಶಿಜು ಅವರ ಮೃತದೇಹ ಶುಕ್ರವಾರ ಸಂಜೆ ವೇಳೆಗೆ ಸ್ವಗ್ರಾಮಕ್ಕೆ ಬರುವ ನಿರೀಕ್ಷೆ ಇದೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಕಡಗದಾಳುವಿನಲ್ಲಿ ನಡೆಯಲಿದೆ ಎಂದು ಕುಟುಂಬದ ಸದ್ಯರು ತಿಳಿಸಿದ್ದಾರೆ.

Similar News