ತೀರ್ಥಹಳ್ಳಿಗೆ 75 ಕೋಟಿ ರೂ.ಯೋಜನೆಗಳಿಗೆ ಸಂಪುಟ ಸಭೆ ಅನುಮೋದನೆ: ಸಚಿವ ಆರಗ ಜ್ಞಾನೇಂದ್ರ

Update: 2022-12-08 16:02 GMT

ಬೆಂಗಳೂರು, ಡಿ.8:ರಾಜ್ಯ ಸರಕಾರದ ಮಹತ್ವಾಕಾಂಕ್ಷೆ, ಗ್ರಾಮೀಣ ರಸ್ತೆ ಸಂಪರ್ಕ, ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 50 ಕೋಟಿ ರೂಪಾಯಿಗಳ ವೆಚ್ಚದ ಎರಡು ಸೇತುವೆ ಕಾಮಗಾರಿಗಳು ಒಳಗೊಂಡಂತೆ ಒಟ್ಟು 75 ಕೋಟಿ ರೂಪಾಯಿಗಳ ವೆಚ್ಚದ ಮೂರು ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.

ಗುರುವಾರ ಈ ಕುರಿತು ಮಾಹಿತಿ ನೀಡಿರುವ, ಗೃಹ ಸಚಿವ ಆರಗ ಜ್ಞಾನೇಂದ್ರ, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ಸುಮಾರು 50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕಿನ ತೂದೂರು-ಮುಂಡುವಳ್ಳಿ ಗ್ರಾಮಗಳನ್ನು ಸಂಪರ್ಕಿಸುವಯೋಜನೆಗೆ, ಆಡಳಿತಾತ್ಮಕ ಮಂಜೂರಾತಿ ಪಡೆದುಕೊಳ್ಳಲಾಗಿದೆ ಎಂದರು.

ಅದೇ ರೀತಿಯಾಗಿ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು, ಕಾರಣಗಿರಿ- ಬಪ್ಪನಮನೆ ಸಂಪರ್ಕ ರಸ್ತೆಯ, ಶರಾವತಿ ಹಿನ್ನೀರಿನ, ಬಿಲ್ಸಾಗರ ದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆಗೂ ಒಪ್ಪಿಗೆ ದೊರೆತಿದ್ದು, ಶೀಘ್ರವಾಗಿ, ಯೋಜನೆ ಅನುಷ್ಠಾನಕ್ಕೆ, ಟೆಂಡರ್ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

Similar News