‘ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧ ಕೋರ್ಟ್ ನಿಂದ ತೆರವು

Update: 2022-12-08 17:27 GMT

ಬೆಂಗಳೂರು, ಡಿ.4: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಕೃತಿ ಮಾರಾಟಕ್ಕೆ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧವನ್ನು ನಗರದ ಸಿಟಿ ಸಿವಿಲ್ ಮತ್ತು ಸತ್ರ ಕೋರ್ಟ್, ತೆರವುಗೊಳಿಸಿ ಆದೇಶಿಸಿದೆ. 

ಈ ಕುರಿತು ಬೆಂಗಳೂರು ನಿವಾಸಿಯಾದ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ.ಎಸ್. ಅವರು ಸಲ್ಲಿಸಿದ್ದ ಪ್ರಕರಣ ಆಕ್ಷೇಪಿಸಿದ್ದ ಪ್ರತಿವಾದಿಗಳ ವಾದವನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಪೀಠವು ಮಾನ್ಯ ಮಾಡಿದೆ. 

ಈ ಆದೇಶದಿಂದಾಗಿ ಕೃತಿಕಾರ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಾಲಯವು ನಿಬರ್ಂಧಿಸಿದ್ದ ಆದೇಶವು ತೆರವುಗೊಂಡಂತಾಗಿದೆ. 

ಮಧ್ಯಂತರ ಆದೇಶ ವಿಸ್ತರಿಸುವಂತೆ ಕೋರಿ ಫಿರ್ಯಾದು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. 2022ರ ನವೆಂಬರ್ 21ರಂದು ಈ ನ್ಯಾಯಾಲಯ ಮಾಡಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಈ ಪುಸ್ತಕದಲ್ಲಿ ಸಾಕಷ್ಟು ತಪ್ಪುಗಳಿದ್ದು, ಕೃತಿ ರಚನೆಕಾರರು ಯಾವ ಮೂಲಗಳಿಂದ ಮಾಹಿತಿ ಪಡೆದಿದ್ದಾರೆ ಎಂಬುದು ಪುಸ್ತಕದಲ್ಲಿ ತಿಳಿಸಿಲ್ಲ. ಮಾನಹಾನಿಕಾರಿಯಾದ ಪದಗಳನ್ನು ಪುಸ್ತಕ ಒಳಗೊಂಡಿದ್ದು, ಇದು ಮುಸ್ಲಿಮ್ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿದೆ ಎಂದು ರಫಿವುಲ್ಲಾ ಬಿ.ಎಸ್. ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. 

ಇದನ್ನೂ ಓದಿ: ದತ್ತಜಯಂತಿ ಹಿನ್ನೆಲೆ; ಮೂಡಿಗೆರೆ ಪಟ್ಟಣದಲ್ಲಿ ಬಲವಂತವಾಗಿ ಅಂಗಡಿ‌ಗಳನ್ನು ಬಂದ್ ಮಾಡಿಸಿದ ಪೊಲೀಸರು: ಆರೋಪ

Full View

Similar News