ನಾನು ನಿಮ್ಮಷ್ಟು ಬುದ್ಧಿವಂತ ಅಲ್ಲ, ಗೂಂಡಾಗಿರಿ ಮಾಡ್ತಿದ್ದೆ...: ಕಾಲೇಜು ದಿನಗಳ ಮೆಲುಕು ಹಾಕಿದ ಸಚಿವ ಶ್ರೀರಾಮುಲು

'ಈಗಲೂ ಜೀನ್ಸ್​ ಪ್ಯಾಂಟ್, ಟೀ ಶರ್ಟ್ ಧರಿಸಿ ಹೋಗ್ತಿದ್ರೆ ಹುಡ್ಗೀರು ನೋಡ್ತಾರೆ...'

Update: 2022-12-10 16:19 GMT

ಬಳ್ಳಾರಿ, ಡಿ.10: 'ನಾನು ನಿಮ್ಮಷ್ಟು ಬುದ್ಧಿವಂತ ಅಲ್ಲ,  ಲಾಸ್ಟ್ ಬೆಂಚ್ ವಿದ್ಯಾರ್ಥಿಯಾಗಿದ್ದೆ, ಪರೀಕ್ಷೆಗಳಲ್ಲಿ ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಎಚ್ ಡಿ ಮಾಡಿದ್ದೇನೆ' ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 

ಶನಿವಾರ ತಾನು ಓದಿದ ವೀರಶೈವ ವಿದ್ಯಾವರ್ಧಕ ಸಂಘದ ಗುರುಶಾಂತಪ್ಪ ಪದವಿ ಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ತಮ್ಮ ಶಾಲಾ ದಿನಗಳನ್ನ ಮೆಲುಕು ಹಾಕಿದರು. 

''ಮೊದಲು ನಾನೂ ಗೂಂಡಾಗಿರಿ ಮಾಡುತ್ತಿದ್ದೆ. ತುಂಬಾ ಗಲಾಟೆ ಮಾಡುತ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ ಹಲವು ಬಾರಿ ಜೈಲಿಗೂ ಹೋಗಿದ್ದೆ' ಎಂದು ನೆನಪು ಮಾಡಿಕೊಂಡರು. 

'ನನಗೆ ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ದರು. ಇವತ್ತು 5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ. ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದು ಇದೇ ಸಂಘ. ನನ್ನ ಶಿಕ್ಷಕರು ನನಗೆ ಸ್ಫೂರ್ತಿ. ನಾನು ಇಂದು ಗಟ್ಟಿ ಮುಟ್ಟಾಗಿ ಆರೋಗ್ಯವಂತನಾಗಿದ್ದರೆ, ಅದಕ್ಕೆ ನನ್ನ ದೈಹಿಕ ಶಿಕ್ಷಕರೂ ಕೂಡ ಕಾರಣ ಎಂದ ಅವರು,  ನನಗೆ 51 ವರ್ಷ ವಯಸ್ಸಾಗಿದ್ದರೂ ಈಗಲೂ ನಾನು ಜೀನ್ಸ್‌ -ಪ್ಯಾಂಟ್‌ ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡುತ್ತಾರೆ' ಎಂದು ಹಾಸ್ಯ ಚಟಾಕಿ ಹಾರಿಸಿದರು. 

Full View

Similar News