ಕೋಲಾರ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ; ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತ, ಶಾಲೆಗಳಿಗೆ ರಜೆ ಘೋಷಣೆ

Update: 2022-12-10 15:26 GMT

ಕೋಲಾರ , ಡಿ. 10: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮಾಂಡೂಸ್' ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಲ್ಲಿಯೂ ಮಳೆ ಸುರಿಯಿತು. ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಶೀತಗಾಳಿ ಸಹಿತ ಜಡಿ ಮಳೆಗೆ ಚಳಿ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

ಶುಕ್ರವಾರ ರಾತ್ರಿಯಿಂದ ನಿರಂತರ ಮಳೆ ಹಾಗೂ ಚಳಿಯಿಂದಾಗಿ ಜನತೆ ಮನೆಯಿಂದ ಹೊರಗಡೆ ಬರಲಾಗದೇ, ಮನೆಗಳಲ್ಲೇ ಬಂಧಿಯಾಗಿದ್ದಾರೆ. ಮಳೆಯಿಂದಾಗಿ ರಸ್ತೆಗಳಲ್ಲಿ ಜನರ ಸಂಚಾರ ಕೂಡ ವಿರಳವಾಗಿತ್ತು.

ಬಾರೀ ಮಳೆ ಹಿನ್ನೆಲೆಯಲ್ಲಿ ಶಿಕ್ಷಣ ಆಯುಕ್ತರ ಆದೇಶದಂತೆ ಆಯಾ ಕ್ಷೇತ್ರ BEO ಗಳಿಗೆ ರಜೆ ನಿರ್ಧಾರದ ಜವಬ್ದಾರಿ ನೀಡಲಾಗಿದ್ದು, ಅಲ್ಲಿನ ಪರಿಸ್ಥಿತಿಗನುಸಾರ ಶಾಲೆಗಳ ರಜಾ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತೊಂದು ಕಡೆ ಅಕಾಲಿಕ ಮಳೆಯಿಂದ ಕಟಾವಿಗೆ ಬಂದ ಧಾನ್ಯಗಳಿಗೆ ಜಡಿ ಮಳೆಯಿಂದ ಹಾನಿಯಾಗುವ ಸಂಭವ ಇದ್ದು  ರೈತರಲ್ಲಿ ಆತಂಕ ಮೂಡಿದೆ.

ಮಾಂಡೂಸ್‌ ಚಂಡಮಾರುತದ ಪರಿಣಾಮವಾಗಿ ಡಿ.13ರ ವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

Similar News