ಕಲಬುರಗಿ: ಶಾಲಾ ಪ್ರವಾಸಕ್ಕೆ ತೆರಳಿದ್ದ ಬಾಲಕಿ ಡ್ಯಾಮ್​ನಲ್ಲಿ ಮುಳುಗಿ ಮೃತ್ಯು

Update: 2022-12-11 14:53 GMT

ಕಲಬುರಗಿ: ಶಾಲೆಯಿಂದ ಪ್ರವಾಸಕ್ಕೆಂದು ಚಂದ್ರಂಪಳ್ಳಿ ಡ್ಯಾಮ್ ಗೆ ಬಂದ ಬಾಲಕಿಯೊಬ್ಬಳು ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಲಬುರಗಿ ನಗರ ಸಂತೋಷ ಕಾಲೋನಿ ಖಾಸಗಿ ಶಾಲೆಯ ವಿದ್ಯಾರ್ಥಿನಿ ಭಾವನಾ ಉದಯ ಪಾಟೀಲ ( 10) ಮೃತಳಾದ ಬಾಲಕಿ ಎಂದು ತಿಳಿದು ಬಂದಿದೆ.

ಶನಿವಾರ ತನ್ನ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ -ಶಿಕ್ಷಕಿಯರೊಂದಿಗೆ ಪ್ರವಾಸಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಈ ಸಂಬಂಧ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News