ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ; ನಿಷೇಧ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಲು ಮುಂದಾದ ಅರ್ಚಕರ ಒಕ್ಕೂಟ

Update: 2022-12-12 16:26 GMT

ಬೆಂಗಳೂರು, ಡಿ.12: ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟವು ಹೈಕೋರ್ಟ್ ಗೆ (high court of karnataka) ಅರ್ಜಿ ಸಲ್ಲಿಸುವ ಎಚ್ಚರಿಕೆಯನ್ನು ಮುಜರಾಯಿ ಇಲಾಖೆಗೆ ನೀಡಿದೆ. 

ತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಫೋನ್ ಬಳಕೆಯನ್ನು ನಿಷೇಧಿಸುವಂತೆ ಈಗಾಗಲೇ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಕರ್ನಾಟಕದ ಮುಜರಾಯಿ ದೇಗುಲಗಳಲ್ಲೂ ಫೋನ್ ನಿಷೇಧಿಸುವಂತೆ ಅರ್ಚಕರ ಒಕ್ಕೂಟವು ಮುಜರಾಯಿ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಿದೆ. ಅಲ್ಲದೆ, ನಿಷೇಧಿಸದಿದ್ದರೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುವ ಎಚ್ಚರಿಕೆಯನ್ನೂ ನೀಡಿದೆ. 

ಕರ್ನಾಟಕದ ದೇವಸ್ಥಾನಗಳಲ್ಲಿ ಸದ್ಯ ಅರ್ಚಕರ ಮೊಬೈಲ್ ಬಳಕೆಯನ್ನು ಮಾತ್ರ ನಿಷೇಧಿಸಲಾಗಿದೆ. ಅದರಂತೆ ಭಕ್ತರಿಗೂ ಮೊಬೈಲ್ ಫೋನ್ ನಿಷೇಧ ಮಾಡಬೇಕು. ಇದರಿಂದ, ದೇವಸ್ಥಾನಗಳಲ್ಲಿ ಕಳ್ಳತನ ಚಟುವಟಿಕೆಗಳನ್ನು ತಡೆಗಟ್ಟಬಹುದು ಹಾಗೂ ಏಕಾಗ್ರತೆ ಪೂಜೆಗೂ ಅನುಕೂಲವಾಗುತ್ತದೆ ಎಂದು ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ.

ಶಾಲೆಗಳಲ್ಲಿ ಶುಲ್ಕವನ್ನು ನ್ಯಾಯಸಮ್ಮತವಾಗಿ ನಿಗದಿಪಡಿಸಿಕೊಳ್ಳಲು ಅರ್ಹವಾಗಿವೆ ಎಂದು ನ್ಯಾಯಪೀಠ ತಿಳಿಸಿದೆ.

ಇದನ್ನೂ ಓದಿ: 'ಬಿಜೆಪಿಯವರ ಸಹವಾಸ ಸಾಕಾಗಿದೆ...': ಕಾಂಗ್ರೆಸ್ ಸೇರಲು ನಿರ್ಧರಿಸಿದ ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್

Similar News