ಜೆಡಿಎಸ್ ತೊರೆದು ಬಿಜೆಪಿ ಸೇರಲು ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದ...: ಎಚ್. ವಿಶ್ವನಾಥ್ ಆರೋಪ

Update: 2022-12-15 11:28 GMT

ಮೈಸೂರು, ಡಿ.15: 'ಜೆಡಿಎಸ್ ತೊರೆದು ಬಿಜೆಪಿ ಸೇರುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಸಂಸದ ಶ್ರೀನಿವಾಸಪ್ರಸಾದ್ ಅವರು ನನಗೆ ಹಣ ಕೊಡಲು ಬಂದಿದ್ದರು‌' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನನ್ನ  ''ಬಾಂಬೆ ಡೈರೀಸ್'' ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ. ಶೀಘ್ರದಲ್ಲೇ ಪುಸ್ತಕ ಹೊರಬರಲಿರುದ್ದು, ನೀವು ಅದನ್ನೇ ತೆಗೆದು ನೋಡಿ' ಎಂದು ಹೇಳಿದರು. 

'ವಿಜಯೇಂದ್ರ ಅವರ ಮನೆಗೆ ಕರೆದುಕೊಂಡು ಹೋಗಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಮಾಡ ಬೇಕು, ನೀವು ಬಿಜೆಪಿಗೆ ಬರಬೇಕು ಎಂದು ನನ್ನನ್ನು ಕರೆದಿದ್ದು ಮರೆತು ಹೋಯಿತೇ? ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಪ್ರಶ್ನೆ ಮಾಡಿದರು.

'ಜೆಡಿಎಸ್ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಮತ್ತು ನೀವು  ನನಗೆ ದುಡ್ಡು ಕೊಡಲು ಬರಲಿಲ್ಲವೇ?' ಎಂದು ಪ್ರಶ್ನೆಗಳ ಸುರಿಮಳೆಗೈದರು.

ಅಜೆಂಡಾ ಬದಲಾವಣೆ ಆಗಲ್ಲ: 'ನನ್ನ ಜೆಂಡಾ ಬದಲಾಗಿರಬಹುದು ಆದರೆ ಅಜೆಂಡಾ ಬದಲಾವಣೆ ಆಗಲ್ಲ, ಕಷ್ಟದಲ್ಲಿರುವ ಜನರ ನೋವು, ದುಃಖ ದುಮ್ಮಾನಗಳನ್ನು ಕೇಳಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನನ್ನ ಅಜೆಂಡಾ ಅದು ನಿರಂತರ' ಎಂದು ತಿಳಿಸಿದರು. 

'ವಿಧಾನಪರಿಷತ್ ಸದಸ್ಯ ಸ್ಥಾನ ಸಿಗುವುದಕ್ಕೂ ಬಿಎಸ್ ವೈ, ಶ್ರೀನಿಸವಾಸ್ ಪ್ರಸಾದ್ ಅವರಾರೂ ಕಾರಣವಾಗಲಿಲ್ಲ. ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದವರು ಆರೆಸ್ಸೆಸ್ ರಾಜ್ಯ ಪ್ರಮುಖ ಮುಕುಂದ. ಅವರಿಲ್ಲದಿದ್ದರೆ ನನಗೆ ಮೋಸವಾಗುತ್ತಿತ್ತು' ಎಂದು ಹೇಳಿದರು.

ಇದನ್ನೂ ಓದಿ: ನನಗೆ ನನ್ನದೇ ಆದ ಶಕ್ತಿ ಇದೆ, ರಾಜಕೀಯವಾಗಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ: ಬಿ.ಎಸ್. ಯಡಿಯೂರಪ್ಪ

 

Similar News