×
Ad

JDS ಕಾಂಗ್ರೆಸ್‌ನ 'ಬಿ' ಟೀಮ್ ಅಲ್ಲದೆ ಇನ್ನೇನು?: ಬಿಜೆಪಿ ವಾಗ್ದಾಳಿ

Update: 2022-12-17 13:32 IST

ಬೆಂಗಳೂರು, ಡಿ.17:  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಕುರಿತ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  ಕಾಂಗ್ರೆಸ್ ನಲ್ಲಿ  ಕೇವಲ ಡಿ.ಕೆ ಶಿವಕುಮಾರ್ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆಶಿ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೆಣದಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ ಎಂದು ಬಿಜೆಪಿ ಕಿಡಿಕಾರಿದೆ. 

'ಕಾಂಗ್ರೆಸ್‌ ಇದುವರೆಗೂ ಒಮ್ಮೆಯಾದರೂ ದೇಶದ ಪರವಾಗಿ ನಿಂತಿದೆಯಾ ಎಂದು ನೋಡಿದರೆ ಒಮ್ಮೆಯೂ ಇಲ್ಲ.  ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೇಳಿದ್ರು ,  ಯೋಧರ ಸಾಮರ್ಥ್ಯ ಪ್ರಶ್ನಿಸಿದ್ರು, ಚೀನಾ ಜೊತೆ ವ್ಯವಹಾರ ಮಾಡಿದ್ರು , ವಿದೇಶದಲ್ಲಿ ಭಾರತವನ್ನು ತೆಗಳಿದ್ರು ಇಂಥವರಾ ದೇಶದ ಚುಕ್ಕಾಣಿ ಹಿಡಿಯ ಹೊರಟವರು?' ಎಂದು ಆಕ್ರೋಶ ವ್ಯಕ್ತಪಡಿಸಿದೆ. 

'ದೇಶದ ಭದ್ರತೆಯ ವಿಚಾರದಲ್ಲೂ ಗಟ್ಟಿಯಾಗಿ ನಾವು ದೇಶದ ಪರ, ಉಗ್ರನನ್ನು ಬೆಂಬಲಿಸುವ ದರ್ದು ನಮಗೆ ಬಂದಿಲ್ಲ ಎಂದು ಹೇಳಲೂ ಆಗದ ಜನತಾ ದಳ ಕಾಂಗ್ರೆಸ್‌ನ ಬಿ ತಂಡವಲ್ಲದೇ ಇನ್ನೇನು?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ. 

Similar News