×
Ad

ಕಲಬುರಗಿ: ನಾಪತ್ತೆಯಾಗಿದ್ದ ನವ ವಿವಾಹಿತೆಯ ಮೃತದೇಹ ನದಿಯಲ್ಲಿ ಪತ್ತೆ

Update: 2022-12-17 14:52 IST

ಕಲಬುರಗಿ, ಡಿ.17: ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ವರದಿಯಾಗಿದೆ.

ಮೃತರನ್ನು ನಾವದಗಿ ಗ್ರಾಮದ ಸೃಷ್ಟಿ‌ ಮಾರುತಿ (21) ಎಂದು ಗುರುತಿಸಲಾಗಿದೆ.

ಡಿಗ್ರಿ 5ನೇ ಸೆಮಿಸ್ಟರ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ನಿವಾಸಿ ಸೃಷ್ಟಿ ಮಾರುತಿಗೆ ಇತ್ತೀಚೆಗೆ ಮದುವೆಯಾಗಿತ್ತು. ಡಿಸೆಂಬರ್ 13 ರಂದು ಕಾಲೇಜ್ ಗೆ ಎಂದು ಹೇಳಿ ಹೋಗಿದ್ದರೆನ್ನಲಾಗಿದ್ದು, ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಈ ಕುರಿತು ಡಿಸೆಂಬರ್​ 14ರ ಬೆಳಗ್ಗೆ ಮಹಾಗಾಂವ್​ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಇಂದು (ಶನಿವಾರ) ಸೃಷ್ಟಿ ಮೃತದೇಹ ಕುರಿಕೋಟಾ ಸೇತುವೆಯ ನೀರಿನಲ್ಲಿ ತೇಲಿ ಬಂದಿದ್ದು ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸೇರಿಕೊಂಡು ಮೃತ ದೇಹ ಹೊರ ತೆಗೆದಿದ್ದಾರೆ. 

ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Similar News