ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು
Update: 2022-12-17 16:59 IST
ವಿಜಯನಗರ, ಡಿ. 17: ಕಾಲುವೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಿಂದ ಶನಿವಾರ ವರದಿಯಾಗಿದೆ.
ಯಶವಂತ್, ಅಂಜಿನಿ, ಗುರುರಾಜ್ ಮೃತ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಕಾಲುವೆಯಲ್ಲಿ ಈಜಲು ಒಟ್ಟು ಆರು ವಿದ್ಯಾರ್ಥಿಗಳು ಹೋಗಿದ್ದರೆನ್ನಲಾಗಿದ್ದು, ಹೊಸಪೇಟೆಯ ಎಂಜಿ ನಗರ, ಗುಂಡಾ ಗ್ರಾಮ ಮತ್ತು ಕೊಪ್ಪಳದ ಹೊಸ ನಿಂಗಾಪುರದ ವಿದ್ಯಾರ್ಥಿಗಳು ಎಂದು ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ( Hospet Rural Police Station) ಮಾಹಿತಿ ನೀಡಿದರು.
ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬದುಕುಳಿದಿರುವ ಮೂವರು ವಿದ್ಯಾರ್ಥಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.