ಇರಾನ್: ಆಸ್ಕರ್ ವಿಜೇತ ಸಿನೆಮಾದ ನಟಿ ಬಂಧನ

Update: 2022-12-18 17:48 GMT

ಟೆಹ್ರಾನ್: ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪರ ಧ್ವನಿ ಎತ್ತಿದ ಖ್ಯಾತ ನಟಿ ತರಾಹ್ನೆ ಅಲಿದೂಸ್ತಿಯನ್ನು ‘ಸುಳ್ಳು ಮತ್ತು ತಿರುಚಿದ ವಿಷಯ ಪ್ರಕಟಿಸಿದ ಮತ್ತು ಅವ್ಯವಸ್ಥೆಗೆ ಪ್ರಚೋದನೆ ನೀಡಿದ’ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.2016ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ‘ದಿ ಸೇಲ್ಸ್ಮ್ಯಾನ್’ ಸಿನೆಮದಲ್ಲಿ ತರಾಹ್ನೆ ಪ್ರಮುಖ ಪಾತ್ರ ನಿರ್ವಹಿಸಿದ್ದರು.

 ‘ನಿಮ್ಮ ಮೌನ ಎಂದರೆ ದಬ್ಬಾಳಿಕೆಗೆ ಬೆಂಬಲ’ ಎಂದು ಡಿಸೆಂಬರ್ 8ರಂದು ತನ್ನ ಇನ್ಸ್ಟಗ್ರಾಂ ಖಾತೆಯಿಂದ ಪೋಸ್ಟ್ ಮಾಡಿದ್ದ ಅವರು ಆ ಪೋಸ್ಟ್ ಗೆ ‘ ಈ ರಕ್ತಪಾತವನ್ನು ನೋಡುತ್ತಿರುವ ಮತ್ತು ಕ್ರಮ ಕೈಗೊಳ್ಳದ ಪ್ರತಿಯೊಂದು ಅಂತರಾಷ್ಟ್ರೀಯ ಸಂಸ್ಥೆಯೂ ಮಾನವೀಯತೆಗೆ ಅವಮಾನವಾಗಿದೆ’ ಎಂದು ಒಕ್ಕಣೆ ನೀಡಿದ್ದರು. 

ಇದಕ್ಕೂ ಮುನ್ನ ನವೆಂಬರ್ 8ರಂದು ಶಿರವಸ್ತ್ರ ಧರಿಸದ, ಹಾಗೂ ಕೈಯಲ್ಲಿ ಪೇಪರ್ ಹಿಡಿದುಕೊಂಡಿರುವ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಕೈಯಲ್ಲಿ ಹಿಡಿದಿರುವ ಪೇಪರ್ ನಲ್ಲಿ ‘ಮಹಿಳೆ, ಬದುಕು, ಸ್ವಾತಂತ್ರ್ಯ’ ಎಂಬ ಘೋಷಣೆ ಬರೆಯಲಾಗಿತ್ತು. 

Similar News