ಸುವರ್ಣ ವಿಧಾನಸೌಧದಲ್ಲಿ ಸಾರ್ವಕರ್ ಫೋಟೊ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2022-12-19 04:58 GMT

ಬೆಳಗಾವಿ, ಡಿ. 19: ಇಲ್ಲಿನ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಸಾರ್ವಕರ್ ಫೋಟೊ ಹಾಕಿರುವ ಕ್ರಮವನ್ನು ಖಂಡಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿಧಾನಸೌಧದ ಮುಖ್ಯ ದ್ವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಸುವರ್ಣಸೌಧದ ಅಸೆಂಬ್ಲಿ ಹಾಲ್ ನಲ್ಲಿ ಇತರ ಮಹನೀಯರ ಭಾವಚಿತ್ರಗಳನ್ನು ಅಳವಡಿಸಿ ಅವರ ಆದರ್ಶಗಳನ್ನು, ವಿಚಾರ ಸಂಪತ್ತನ್ನು ಜೀವಂತವಾಗಿ ಇಡಬೇಕಾಗಿದೆ ಎಂದು ಸಭಾಧ್ಯಕ್ಷರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರೂ, ಬಾಬು ಜಗಜೀವನ್‌ರಾಮ್, ಕುವೆಂಪು, ವಲ್ಲಭಬಾಯಿ ಪಟೇಲ್ ಮುಂತಾದ ದಾರ್ಶನಿಕರು, ವಿಚಾರವಂತರು ಹಾಗೂ ರಾಷ್ಟ್ರ ನಾಯಕರುಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರುಗಳ ವಿಚಾರಧಾರೆ, ಆದರ್ಶಗಳು ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಆ ಕಾರಣದಿಂದಾಗಿ ಈ ಎಲ್ಲಾ ಮಹನೀಯರ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣಸೌಧದ ಅಸೆಂಬ್ಲಿ ಹಾಲಿನಲ್ಲಿ ಅಳವಡಿಸಿ ಅವರುಗಳ ಆದರ್ಶಗಳಿಗೆ ಮೆರಗು ನೀಡಬೇಕೆಂದು ಈ ಮೂಲಕ ತಮಗೆ ಕೋರುತ್ತೇನೆ ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

Similar News