NPS ವಿರುದ್ಧ ಸರ್ಕಾರಿ ನೌಕರರ ಅಹೋರಾತ್ರಿ ಧರಣಿ; ಸದನದಲ್ಲಿ ಧ್ವನಿಯೆತ್ತಿದ ಜೆಡಿಎಸ್‌ ಶಾಸಕ ಲಿಂಗೇಶ್‌

ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಆಗ್ರಹ

Update: 2022-12-20 12:08 GMT

ಬೆಳಗಾವಿ, ಡಿ.20: ನೂತನ ರಾಷ್ಟ್ರೀಯ ಪಿಂಚಣಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಜಾರಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘದಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಜೆಡಿಎಸ್‌ ಶಾಸಕ ಲಿಂಗೇಶ್‌ ಅವರು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಸದನದಲ್ಲಿ ಆಗ್ರಹಿಸಿದ್ದಾರೆ.

ವಿಧಾನಸಭೆ ಪ್ರಶ್ನೋತ್ತರ ವೇಳೆ NPS ಬಗ್ಗೆ ಪ್ರಶ್ನೆ ಕೇಳಿದ ಶಾಸಕ ಲಿಂಗೇಶ್,  ರಾಜ್ಯಾದ್ಯಂತ ಪೆನ್ಶನ್ ಸ್ಕೀಮ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ. ಕಡಿಮೆ ಪೆನ್ಶನ್ ನೀಡಲಾಗ್ತಿದೆ‌.ಹಿಡಿಗಂಟು ನೀಡ್ತೀವಿ ಅಂತ ಹೇಳಿ ಜೂಜಿಗೆ ಬಿಟ್ಟಂತಾಗಿದೆ. ಹಳೆಯ ಪಿಂಚಣಿ ಯೋಜನೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು. 

ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ,  ಇದೊಂದು ಗಂಭೀರವಾದ ವಿಚಾರ. ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತೆ. ಬಜೆಟ್ ಮಾಡ್ತೀವಿ, ಹಣ ಎಲ್ಲೆಲ್ಲಿಗೆ ಹೋಗುತ್ತೆ ಅಂತ ಚರ್ಚೆ ಮಾಡುತ್ತೇವೆ. ರಾಜ್ಯದ ಸರ್ಕಾರಿ ನೌಕರರಿಗೆ ಹಲವು ಸೌಲಭ್ಯ ನೀಡಿದ್ದೇವೆ ಎಂದು ತಿಳಿಸಿದರು. .

TA, DA ಕಾಲಕಾಲಕ್ಕೆ ನಿಡ್ತಿದ್ದೇವೆ. 7ನೇ ಪೇ ಕಮಿಷನ್ ನೇಮಕ ಮಾಡುವ ಬೇಡಿಕೆ ಇತ್ತು, ಮಾಡಿದ್ದೇವೆ. NPD 2004ರ ನೌಕರರಿಂದ ಜಾರಿಗೆ ಬಂದಿದೆ. ಇದರ ಸಾದಕ ಬಾದಕ ಚರ್ಚೆ ಮಾಡಬೇಕು. ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳೋದು ಸರ್ಕಾರದ ಅಧಿಕಾರ ಇರಬಹುದು. ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಹೇಗೆ ಅನ್ನೋದು ಚರ್ಚೆ ಆಗಬೇಕು. ಇದನ್ನ ಪ್ರತ್ಯೇಕ ಚರ್ಚೆ ಮಾಡಿ ಅಭಿಪ್ರಾಯ ಪಡೆಯುವಂತೆ ಸಿಎಂ ಬೊಮ್ಮಾಯಿ ಸ್ಪೀಕರ್‌ಗೆ ಮನವಿ ಮಾಡಿದರು.

Similar News