ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಸಾಹಿತಿ ಪ್ರೊ. ಭಗವಾನ್ ಗೆ ಜಾಮೀನು ಮಂಜೂರು
Update: 2022-12-20 14:41 IST
ಸಾಗರ,ಡಿ.20: ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೃತಿ ರಚಿಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೊ. ಭಗವಾನ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಸಾಗರ ಕೋರ್ಟ್ ಆದೇಶ ಹೊರಡಿಸಿದೆ.
ಸಾಹಿತಿ ಭಗವಾನ್ ಅವರು 'ರಾಮ ಮಂದಿರ ಏಕೆ ಬೇಡ?' ಕೃತಿ ರಚಿಸಿದ್ದರು. ಈ ಕೃತಿಯು ವಿವಾದತ್ಮಾಕವಾಗಿದೆ. ಬಹು ಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಾಗರ ತಾಲೂಕು ಇಕ್ಕೇರಿ ಗ್ರಾಮದ ಮಹಾಬಲೇಶ್ವರ್ ಎಂಬುವರು ಸಾಗರದ JMFC ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಇತ್ತೀಚೆಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಮಂಗಳವಾರ ಸಾಗರದ ನ್ಯಾಯಾಲಯಕ್ಕೆ ಹಾಜರಾಗಿದ್ದ ಕೆ.ಎಸ್ ಭಗವಾನ್ ಅವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಧೀಶ ಶ್ರೀ ಶೈಲ ಭಗಾಡೆ ಅವರು ಆದೇಶ ನೀಡಿದರು.
ಭಗವಾನ್ ಪರ ವಕೀಲ ರಶೀದ್,ಹೆಚ್.ಬಿ ರಾಘವೇಂದ್ರ ವಾದ ಮಂಡಿಸಿದರು.