×
Ad

‘ಬಸ್ ಸ್ಟ್ಯಾಂಡ್’ ಕೆಡವಿ ಆಕಾರ ಬದಲಿಸೋದು ಬಿಟ್ಟು ಬಸ್ ಸಮಸ್ಯೆ ಬಗೆಹರಿಸಿ: ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿ

Update: 2022-12-20 17:23 IST

ಬೆಂಗಳೂರು, ಡಿ.20: 'ಬಸ್ ಸ್ಟ್ಯಾಂಡ್’ ಆಕಾರ ಬದಲಿಸೋದು ಬಿಟ್ಟು  ಬಸ್ ಸಮಸ್ಯೆ ಬಗೆಹರಿಸಿ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ,  'ಬಸ್ಟ್ಯಾಂಡ್ ಆಕಾರ ಹೇಗಿದೆ ಅಂತ ನೋಡೋ ಮೈಸೂರು ಸಂಸದರೇ, ಸ್ವಲ್ಪ ಆ ಬಸ್ಟ್ಯಾಂಡ್ ಗೆ ಎಷ್ಟು ಬಸ್ ಬರ್ತಿವೆ? ವಿದ್ಯಾರ್ಥಿಗಳು ಹೇಗೆ ಪ್ರಯಾಣ ಮಾಡ್ತಿದ್ದಾರೆ ಅಂತಾನೂ ನೋಡಿ. ಕಟ್ಟಿರೋ ಬಸ್ಟ್ಯಾಂಡ್ ಕೆಡವಿ ಆಕಾರ ಬದಲಿಸೋದು ಬಿಟ್ಟು ಈ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ' ಎಂದು ಹೇಳಿದೆ. 

ಭಾರೀ ಚರ್ಚೆಗೆ ಕಾರಣವಾಗಿದ್ದ ಬಸ್ ನಿಲ್ದಾಣ: ಮೈಸೂರು ನಗರದ ಕೃಷ್ಣರಾಜ ವಿಧಾನ ಸಭೆ ಕ್ಷೇತ್ರದ ಊಟಿ ರಸ್ತೆಯಲ್ಲಿರುವ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. 'ಬಸ್ ನಿಲ್ದಾಣ ಗುಂಬಜ್ ರೀತಿ ಇದೆ. ಅದನ್ನು ಒಡೆಯುತ್ತೇನ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. 

Similar News