ಮೈಸೂರು ಎಸ್ಪಿ ಸೇರಿ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2022-12-21 15:53 IST
ಬೆಂಗಳೂರು, ಡಿ.20: ಐವರು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆರ್. ಚೇತನ್ ಸೇರಿದಂತೆ ಐವರು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಾಟ್ಕರ್ ಅವರನ್ನು ನೇಮಕ ಮಾಡಲಾಗಿದೆ. ಆರ್.ಚೇತನ್ ಅವರು ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್ಪಿಯಾಗಿ ವರ್ಗವಾವಣೆಗೊಂಡಿದ್ದಾರೆ.
| ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
►ಆರ್.ಚೇತನ್- ಎಸ್ಪಿ, ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು
►ಸೀಮಾ ಲಾಟ್ಕರ್- ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು
►ಶಿವಪ್ರಕಾಶ್ ದೇವರಾಜ್- ಎಐಜಿಪಿ, ಸಿಸಿಬಿ, ಬೆಂಗಳೂರು
►ಎಂ.ಮುತ್ತುರಾಜ್- ಮೈಸೂರು ಡಿಸಿಪಿ, ಕಾನೂನು ಸುವ್ಯವಸ್ಥೆ
►ಬಿ.ಎಸ್.ನ್ಯಾಮೇಗೌಡ- ಪೊಲೀಸ್ ವರಿಷ್ಠಾಧಿಕಾರಿ, ಗದಗ