×
Ad

ಮೈಸೂರು ಜಿಲ್ಲೆ ನೂತನ ಎಸ್ಪಿ ಯಾಗಿ ಸೀಮಾ ಲಾಟ್ಕರ್ ನೇಮಕ

Update: 2022-12-21 19:42 IST

ಮೈಸೂರು,ಡಿ.21: ಮೈಸೂರು ಜಿಲ್ಲೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಾಟ್ಕರ್ ನೇಮಕವಾಗಿದ್ದಾರೆ.

ಮೈಸೂರಿನ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಚೇತನ್ ಅವರ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಸೀಮಾ ಲಾಟ್ಕರ್ ಬಂದಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಅವರು ಇದೀಗ ಸಾಂಸ್ಕೃತಿಕ ನಗರಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಮೈಸೂರು ಎಸ್ಪಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಮೈಸೂರಿನಿಂದ ವರ್ಗಾವಣೆಗೊಂಡಿರುವ ಚೇತನ್ ಅವರು ಬೆಂಗಳೂರಿನ ಗುಪ್ತಚರ ಇಲಾಖೆಯ ಎಸ್ಪಿಯಾಗಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Similar News