ಮಂಡ್ಯ: ಪಂಚರತ್ನ ರಥಯಾತ್ರೆ ವೇಳೆ ಸುಸ್ತಾಗಿ ಕುಸಿದು ಬಿದ್ದ ಶಾಸಕ ತಮ್ಮಣ್ಣ
Update: 2022-12-21 20:42 IST
ಮಂಡ್ಯ, ಡಿ.20: ಪಂಚರತ್ನ ರಥಯಾತ್ರೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜತೆ ಪಾಲ್ಗೊಂಡಿದ್ದ ಶಾಸಕ ಡಿ.ಸಿ.ತಮ್ಮಣ್ಣ ಬಿಸಿಲಿನ ಝಳಕ್ಕೆ ತೆರೆದ ವಾಹನದಲ್ಲೇ ಕುಸಿದುಬಿದ್ದ ಘಟನೆ ನಡೆದಿದೆ.
ನಂತರ ಸ್ಥಳದಲ್ಲಿದ್ದ ತಮ್ಮಣ್ಣನ ಪುತ್ರಿ ಡಾ. ಸೌಮ್ಯ ಹಾಗೂ ರಥಯಾತ್ರೆಯ ಜೊತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದ ವೈದ್ಯಕೀಯ ಸಿಬ್ಬಂದಿ ತಮ್ಮಣ್ಣ ಅವರ ರಕ್ತದೊತ್ತಡ ಮತ್ತು ಸಕ್ಕರೆ ಅಂಶ ಪರಿಶೀಲನೆ ನಡೆಸಿದರು. ಅವರ ಆರೋಗ್ಯದಲ್ಲಿ ಸಾಮಾನ್ಯ ಸ್ಥಿತಿ ಇದ್ದು, ಯಾವುದೇ ಆತಂಕವಿರಲಿಲ್ಲ ಎಂದು ವೈದ್ಯರು ತಿಳಿಸಿದರು.
ಮಂಗಳವಾರ ಮಳವಳ್ಳಿ ತಾಲೂಕಿನಲ್ಲಿ ಯಾತ್ರೆ ನಡೆಸಿ ತಡರಾತ್ರಿ ತಾಲೂಕಿನ ದುಗ್ಗನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ, ಬುಧವಾರ ಬೆಳಗ್ಗೆ ಗ್ರಾಮಸ್ಥರ ಕುಂದುಕೊರತೆ ಆಲಿಸಿ, ಸುದ್ದಿಗೋಷ್ಠಿ ನಡೆಸಿದ ನಂತರ, ಭಾರತಿನಗರ ಮೂಲಕ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ರಥಯಾತ್ರೆಯಲ್ಲಿ ಪ್ರವೇಶಿಸಿದರು.