ಸಚಿವ ಸ್ಥಾನದ ಭರವಸೆ; 3 ದಿನಗಳ ಬಳಿಕ ಸದನಕ್ಕೆ ಹಾಜರಾದ ರಮೇಶ್ ಜಾರಕಿಹೊಳಿ, ಕೆ.ಎಸ್ ಈಶ್ವರಪ್ಪ

Update: 2022-12-22 06:45 GMT

ಬೆಳಗಾವಿ, ಡಿ. 22: ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಮಾಜಿ ಸಚಿವರು ಹಾಗೂ ಬಿಜೆಪಿ ಹಿರಿಯ ನಾಯಕರಾದ  ಕೆ. ಎಸ್.‌ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರು ಬುಧವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಮುಖ್ಯಮಂತ್ರಿಗಳು ಸಚಿವ ಸ್ಥಾನದ ಭರವಸೆ ನೀಡಿದ ಬೆನ್ನಲ್ಲೇ ಇದೀಗ ಮೂರು ದಿನಗಳ ಬಳಿಕ ಇಂದು (ಗುರುವಾರ) ಇಬ್ಬರೂ ನಾಯಕರು ಕಲಾಪಕ್ಕೆ ಹಾಜರಾದರು. 

ವಿಧಾನ ಸಭೆ ಅಧಿವೇಶನಕ್ಕೆ ಆಗಮಿಸಿದ  ಕೆ. ಎಸ್.‌ ಈಶ್ವರಪ್ಪ  ಸುವರ್ಣ ಸೌಧದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿ,  ನಾವು ಎರಡು ದಿನ ಅಧಿವೇಶನಕ್ಕೆ ಹಾಜರಾಗದಿರುವ ಉದ್ದೇಶ ಏನು ಅಂದರೆ, ನಮ್ಮ ವಿರುದ್ಧದ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಮೇಲೂ ಯಾಕೆ ನಮ್ಮ ಸಂಪುಟಕ್ಕೆ ಸರ್ಪಡೆ ಮಾಡಿಕೊಳ್ಳಲಿಲ್ಲ, ಇದು ನಮ್ಮ ಪ್ರಶ್ನೆಯಲ್ಲ ಇಡೀ ರಾಜ್ಯದ ಜನರು ಹಾಗೂ ಕಾರ್ಯಕರ್ತರ ಪ್ರಶ್ನೆ. ಇದಕ್ಕೆ ನಮ್ಮ ಹತ್ತಿರ ಉತ್ತರ ಇಲ್ಲ' ಎಂದು ಹೇಳಿದರು. 

'ನಾನಾಗಲಿ, ರಮೇಶ್ ಜಾರಕಿಹೋಳಿ ಆಗಲಿ ಮಂತ್ರಿ ಸ್ಥಾನ ಈಗ ನೋಡಿಲ್ಲ. ನಮ್ಗೂ ಗೊತ್ತು , ಇನ್ನೂ ಮೂರು ತಿಂಗಳಲ್ಲಿ ಸಚಿವರಾಗಿ ಏನು ಕಡಿದು ಗುಡ್ಡೆ ಹಾಕೋಕಾಗಲ್ಲ' ಎಂದು ಈಶ್ವರಪ್ಪ ಹೇಳಿದರು. 

Similar News