ಅಧಿವೇಶನಕ್ಕಿಂತ ನನಗೆ ಪಂಚರತ್ನ ರಥಯಾತ್ರೆಯೇ ಮುಖ್ಯ, ಏಕೆಂದರೆ...: ಕುಮಾರಸ್ವಾಮಿ ಹೇಳಿದ್ದೇನು?
Update: 2022-12-22 20:34 IST
ಮಂಡ್ಯ, ಡಿ.22: ವಿಧಾನಸಭಾ ಅಧಿವೇಶನಕ್ಕಿಂತ ನನಗೆ ಪಂಚರತ್ನ ರಥಯಾತ್ರೆಯೇ ಮುಖ್ಯ. ಏಕೆಂದರೆ, 75 ವರ್ಷಗಳಿಂದ ಈ ದೇಶದಲ್ಲಿ ಆಗಿರುವ ಅನಾಹುತಗಳಿಗೆ ಪರಿಹಾರ ಕಂಡುಕೊಳ್ಳಲು ಈ ಯಾತ್ರೆಯನ್ನು ಆರಂಭಿಸಿದ್ದೇನೆ. ಇದು ಈಗಿನ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾವಿ ಹೇಳಿದ್ದಾರೆ.
ಅವರು ಗುರುವಾರ ಹನಕೆರೆ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಕಳೆದ ಮೂರು ದಿನದಿಂದ ಸದನದಲ್ಲಿ ಸಕಾರಾತ್ಮಕವಾದ ಯಾವುದಾದರೂ ಚರ್ಚೆ ನಡೆದಿದೆಯೇ? ಹೋಗಲಿ ಈ ಹಿಂದೆ ಚರ್ಚೆಯಾದ ವಿಷಯಗಳಲ್ಲಿ ಎಷ್ಟು ಅನುಷ್ಠಾನಕ್ಕೆ ಬಂದಿವೆ?' ಎಂದು ಮರುಪ್ರಶ್ನಿಸುವ ಮೂಲಕ ತಾವು ಸದನಕ್ಕೆ ಗೈರು ಹಾಜರಾಗಿರುವ ಸಂಬಂಧ ಟೀಕೆಗಳಿಗೆ ಅವರು ತಿರುಗೇಟು ನೀಡಿದರು.
ಯಾತ್ರೆ ಭಾಗವಾಗಿ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲೆ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.