×
Ad

ಹನೂರು: ರಸ್ತೆ ಅಪಘಾತದಲ್ಲಿ ಮಗು ಸ್ಥಳದಲ್ಲೇ ಮೃತ್ಯು, ಆರು ಮಂದಿಗೆ ಗಂಭೀರ ಗಾಯ

Update: 2022-12-22 21:52 IST

ಹನೂರು, ಡಿ.22: ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟು, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಗಂಭೀರ ಗಾಯಗೊಂಡಿರುವ  ಘಟನೆ ಹನೂರು ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆ ಬಳಿ ವರದಿಯಾಗಿದೆ.

ಮೈಸೂರು ತಾಲೂಕು ಮಾರ್ಬಳ್ಳಿ ಗ್ರಾಮದ ತನ್ಮಯ್ (3) ಮೃತ ಮಗು ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ ಮಂಜುಳ, ಸಾಕಮ್ಮ, ಕಿರಣ್, ಚಂದನ್, ಸಣ್ಣ ತಾಯಮ್ಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಉಲುಸುಗುಡ್ಡೆ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಯಿಂದ ಎಡಭಾಗಕ್ಕೆ ಚಲಿಸಿ ಎಡಭಾಗದಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ತೀವ್ರ ಜಖಂಗೊಂಡಿದ್ದರ ಪರಿಣಾಮ ಮಗು ಸಾವನ್ನಪ್ಪಿದ್ದು, ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆನ್ನಲಾಗಿದೆ.

ಘಟನೆ ಬಳಿಕ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Similar News