×
Ad

ರಾಜ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯದ ಬಗ್ಗೆ ನಿರ್ಧಾರ: ಆರೋಗ್ಯ ಸಚಿವ ಡಾ.ಸುಧಾಕರ್

Update: 2022-12-23 11:02 IST

ಬೆಳಗಾವಿ, ಡಿ.23: ಚೀನಾದಲ್ಲಿ ಕೋವಿಡ್(Covid) ಹಾವಳಿ ಮತ್ತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸಂದೇಶ ರವಾನಿಸಿದೆ. ಅದರಂತೆ ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

 ಸದ್ಯಕ್ಕೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡಿಲ್ಲ,  ಸಲಹೆ ಕೊಟ್ಟಿದ್ದೇವೆ.  ಪ್ರಧಾನಿ ಮೋದಿ, ಸಚಿವರು ಗುರುವಾರ ಪಾರ್ಲಿಮೆಂಟ್ ನಲ್ಲಿ ಮಾಸ್ಕ್ ಹಾಕಿ ಆದರ್ಶ ಮೆರೆದಿದ್ದಾರೆ. ಇಡೀ ದೇಶ ಅವರನ್ನು ಅನುಸರಿಸಬೇಕು. ಮಾಸ್ಕ್ ಧರಿಸುವ ಮೂಲಕ ರಕ್ಷಣೆ ಪಡೆಯಬೇಕು ಎಂದರು.

ಕೋವಿಡ್ ವಿರುದ್ಧದ ಬೂಸ್ಟರ್ ಡೋಸ್ ವೇಸ್ಟ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಲಕ್ಷಾಂತರ ಡೋಸ್ ಬಗ್ಗೆ ಗೊತ್ತಿಲ್ಲ. ಸ್ವಲ್ಪ ಮಟ್ಟಿಗೆ ಲಸಿಕೆ ವ್ಯರ್ಥವಾಗಿದೆ. ಜನರು ಮೊದಲ ಎರಡು ಡೋಸ್ ಲಸಿಕೆ ಪಡೆಯುವಲ್ಲಿ ಆಸಕ್ತಿ ತೋರಿದ್ದರು. ಆದರೆ ಬೂಸ್ಟರ್ ಡೋಸ್ ಗೆ ಆಸಕ್ತಿ ವಹಿಸಿಲ್ಲ. ಕೋವಿಡ್ ಹೋಗಿದೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಚೀನಾ, ಕೆಲವು ದೇಶಗಳ ಪರಿಸ್ಥಿತಿ ನೋಡಿ ಏನಾಗಿದೆ ಅಂತ ಎಂದ ಸಚಿವರು, ಜನರು ಆಸಕ್ತಿಯಿಂದ ಲಸಿಕೆ ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Similar News