×
Ad

VIDEO- ಹುಬ್ಬಳ್ಳಿ ದರ್ಗಾಕ್ಕೆ ಭೇಟಿ ನೀಡಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

Update: 2022-12-23 23:27 IST

ಹುಬ್ಬಳ್ಳಿ: ನಾಗರಿಕತೆ ಬೆಳೆಯುತ್ತಿದೆ. ಅವಶ್ಯಕತೆಯು ಹೆಚ್ಚಿದೆ. ಅಲ್ಲದೇ ರಸ್ತೆಗಳ ವಿಸ್ತೀರ್ಣವು ಹೆಚ್ಚಾಗುತ್ತಿರುವ ಕಾರಣ ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿಯೇ 13 ಧಾರ್ಮಿಕ ಸ್ಥಳಗಳನ್ನು ತೆರವು ಮಾಡಲಾಗಿದೆ. ದೇಗುಲಗಳನ್ನು ಹಾಗೂ ಮಸೀದಿ ಮತ್ತು ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಭೈರಿದೇವರಕೊಪ್ಪದ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ವೀಕ್ಷಣೆಗೆ ಬಂದಿದ್ದೆ. ಇಲ್ಲಿನ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ಇಂತಹ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

'ಈಗಾಗಲೇ ದರ್ಗಾವನ್ನು ತೆರವು ಮಾಡಿದ್ದಾರೆ. ಗೋರಿಗಳನ್ನು ಕೂಡ ಶಿಫ್ಟ್ ಮಾಡಿದ್ದಾರೆ. ಹೊಸದಾದ ಮಸೀದಿ ನಿರ್ಮಾಣದ ಬಗ್ಗೆ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಅವರೆಲ್ಲರೂ ಕೂಡಿಕೊಂಡು ಸ್ಥಳದ ಬಗ್ಗೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಲಿ. ಈ ಬಗ್ಗೆ ಸಹಕಾರ ಮಾಡುತ್ತೇನೆ ಎಂದು' ಹೇಳಿದರು.

'ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಹೈಕೋರ್ಟ್ ಕೂಡ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಜನರ ಅವಶ್ಯಕತೆಗೆ ಅನುಗುಣವಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನೋವಿನ ಸಂಗತಿ' ಎಂದು ತಿಳಿಸಿದರು.

Full View

Similar News