ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

''ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಉದ್ದೇಶ''

Update: 2022-12-24 15:49 GMT

ಮೈಸೂರು,ಡಿ.24: ಕರ್ನಾಟಕ ಮೈಸೂರಿನ ಅಂಬಾವಿಲಾಸ ಅರಮನೆ  ಆವರಣದಲ್ಲಿ 12ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕೃತಗೊಂಡ ಕಾಶಿ ವಿಶ್ವನಾಥ ದೇವಾಲಯ, ಸ್ವದೇಶೀ ನಿರ್ಮಿತ ಒಂದೇ ಮಾತರಂ ರೈಲು ಗಾಡಿ,  ಅಮರ್ ಜವಾನ್ ಸ್ಮಾರಕ, ಹೂವಿನಿಂದ ಅಲಂಕೃತಗೊಂಡ ಆನೆ ಸೇರಿದಂತೆ ಕಲಾಕೃತಿಗಳ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು ಫಲಪುಷ್ಪ ಪದರ್ಶನ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕೊರೋನ ಬಗ್ಗೆ ಯಾವುದೇ ಆತಂಕ ಪಡುವ ಪ್ರಮೇಯವಿಲ್ಲ, ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಲಾಗುವುದು ಎಂದರು.

ರಾಜ್ಯದ ರೈತರಿಗೆ ನೇರವಾಗಲೆಂದು ಸಹಕಾರ ಇಲಾಖೆಯ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ 24ಸಾವಿರ ಕೋಟಿ  ನೂತನ ಸಾಲ ನೀಡಲಾಗುವುದು, ಈ ಯೋಜನೆ ಮೂಲಕ 33ಲಕ್ಷ ರೈತರಿಗೆಉ ಸಾಲ ನೀಡಲಾಗುವುದು, ಈಗಾಗಲೇ ರಾಜ್ಯದ ಡಿಸಿಸಿ ಬ್ಯಾಂಕ್ ಗಳ ಮೂಲಕ ನೂತನ ಸಾಲ ನೀಡಲಾಗುತ್ತಿದೆ, ಈ ಹಿಂದಿನ ಸಾಲ ಪಡೆದ ರೈತರು ಸಹ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕರಾದ ಎಸ್ ಎ ರಾಮದಾಸ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಭಾಗಿಯಾಗಿದ್ದರು.

Similar News