ಗಡಿ ವಿವಾದ: ಎಂಇಎಸ್, ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್

Update: 2022-12-24 18:09 GMT

ಬೆಳಗಾವಿ, ಡಿ.24: ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಎಂಇಎಸ್, ಕನ್ನಡಪರ ಮುಖಂಡರರೊಂದಿಗೆ ರಾಜ್ಯ ಕಾನೂನು ಮತ್ತು ಸುವವ್ಯಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಸಭೆ ನಡೆಸಿದ್ದು, ಅಹಿತಕರ ಘಟನೆಗಳು ಜರುಗಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡಿದರು.

ರಾಜ್ಯೋತ್ಸವ ದಿನದಂದು ಕರಾಳ ದಿನ ಮಾಡುವುದನ್ನು ಬಿಡಿ. ಬೆಳಗಾವಿ ಅಧಿವೇಶನ ವೇಳೆ ಮಹಾಮೇಳ ಮಾಡುವುದು ಬಿಡಿ ಎಂದು ಎಂಇಎಸ್ ಮುಖಂಡರಿಗೆ  ಬುದ್ಧಿ ಮಾತು ಹೇಳಿದರು.

ಇನ್ನೂ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು ತೀರ್ಪು ಬರುವವರೆಗೂ ಶಾಂತಿ ಕಾಪಾಡುವಂತೆ ತಿಳಿಸಿದ್ದಾರೆ. ಈ ಸಭೆಯಲ್ಲಿ ಕರವೇ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಹಾಗೂ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್, ಎಂಇಎಸ್ ಮುಖಂಡರಾದ ಪ್ರಕಾಶ್ ಮರಗಾಳೆ ಸೇರಿದಂತೆ ಪ್ರಮುಖರಿದ್ದರು.

Similar News