×
Ad

ಭದ್ರಾವತಿ | ಬಾಲಕನನ್ನು ಅಪಹರಿಸಿ ಹಣದ ಬೇಡಿಕೆ: ಐವರು ಆರೋಪಿಗಳ ಬಂಧನ

Update: 2022-12-25 13:44 IST

ಶಿವಮೊಗ್ಗ, ಡಿ.25: ಬಾಲಕನೊಬ್ಬನನ್ನು ಅಪಹರಿಸಿ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಒಂದನ್ನು ಭದ್ರಾವತಿ ಪೊಲೀಸರು ಬಂಧಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಮುಹಮ್ಮದ್ ಅಝರ್ ಎಂಬವರ 16 ವರ್ಷದ ಮಗನನನ್ನು ಡಿ.22ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಅಲ್ಲದೆ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ನ್ಯೂಟೌನ್ ಠಾಣೆ ಪೊಲೀಸರು ಬಾಲಕನನ್ನು ಪತ್ತೆ ಮಾಡಿದ್ದಾರೆ. ಅಪಹರಣಕಾರರನ್ನು ಬಂಧಿಸಿದ್ದಾರೆ. ಭದ್ರಾವತಿ ನೆಹರು ನಗರದ ಮುಬಾರಕ್ ಅಲಿಯಾಸ್ ಡಿಚ್ಚಿ (24), ಸಾಗರದ ಜಾಬಿರ್ ಬಾಷಾ ಅಲಿಯಾಸ್ ರಾಬರ್ಟ್ (22), ಶಿವಮೊಗ್ಗ ಟಿಪ್ಪುನಗರದ ಮುಸ್ತಫಾ (26), ಸಾಗರ ನೂರುಲ್ ಹುದಾ ಮಸೀದಿ ಸಮೀಪದ ಅಡಿಕೆ ವ್ಯಾಪಾರಿ ಅಬ್ದುಲ್ ಸಲಾಂ (26), ಸಾಗರ ಅಣಲೆಕೊಪ್ಪದ ಇರ್ಫಾನ್ (31) ಬಂಧಿತರು. ಇವರಿಂದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರಾವತಿ ಎಎಸ್ಪಿ ಜಿತೇಂದ್ರ ದಯಾಮ, ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್ಐ ರಂಗನಾಥ ಅಂತರಗಟ್ಟಿ, ಸಿಬ್ಬಂದಿ ಎಎಸ್ಐ ವೇಂಕಟೇಶ, ರಾಘವೇಂದ್ರ, ಶ್ಯಾಮಕುಮಾರ, ಶ್ರೀಧರ, ರೂಪೇಶ, ಹಾಲಪ್ಪ, ಮೌನೇಶ, ಪೈರೋಜ್, ಸುನೀಲ್ ಕುಮಾರ, ತೀರ್ಥಲಿಂಗಪ್ಪ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

Similar News