×
Ad

ಸಂವಿಧಾನವನ್ನು ಎದೆಗೆ ಅಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಡೋಣ : ದಸಂಸ ಕರೆ

Update: 2022-12-25 20:46 IST

ಕೋಲಾರ,ಡಿ.25: ದಲಿತ ಹೋರಾಟ ಸಂಘರ್ಷ ಸಮಿತಿ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಡೆದ "ಬನ್ನಿ ಸಂವಿಧಾನ ಎದೆಗೆ ಅಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಡೋಣ" ಕಾರ್ಯಕ್ರಮದ ಭಾಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕಿ, ಮನುಸ್ಮೃತಿಗೆ ಕೊಳ್ಳಿ ಇಟ್ಟು, ಸಂವಿಧಾನ ಎದೆಗಪ್ಪಿಕೊಂಡ ವಿಶಿಷ್ಟ ಕಾರ್ಯಕ್ರಮ ಕೋಲಾರದಲ್ಲಿ ನಡೆಯಿತು. 

1927ರ ಡಿಸೆಂಬರ್ 25ರಂದು ಬಾಬಾ ಸಾಹೇಬ್ ಡಾ ಅಂಬೇಡ್ಕರ್ ರವರ ನೇತೃತ್ವದಲ್ಲಿ ಮನುಸ್ಮೃತಿಯನ್ನು ದಹಿಸಲಾಗಿತ್ತು.  ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿದ ಅಂಬೇಡ್ಕರ್, ಮನುಸ್ಮೃತಿ ಅಸಮಾನತೆಯನ್ನು ಪ್ರತಿನಿಧಿಸುತ್ತದೆ, ಸಮಾನತೆಯನ್ನು ನಿರಾಕರಿಸುತ್ತದೆ ಎಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮಖಂಡರಾದ ಅಣ್ಣಯ್ಯ, ಜಿಗಣೆ ಶಂಕರ್, ಸ್ಪೆಕ್ಸ್ ನಾರಾಯಣಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಹಾರೋಹಳ್ಳಿ ರವಿ, ಮೆಕಾನಿಕ್ ಶ್ರೀನಿವಾಸ,  ಸೀಪೂರು ದೇವರಾಜ್, ಹಿರೇಕರಪನಹಳ್ಳಿ ರಾಮಪ್ಪ, ಕಲಾವಿದರಾದ ಹಿರೇಕರಪನಹಳ್ಳಿ ಯಲ್ಲಪ್ಪ, ಬಸಪ್ಪ, ಮಂಜುನಾಥ, ಮಾರ್ಜೇನಹಳ್ಳಿ ಮುನಿಸ್ವಾಮಿ, ದೊಡ್ಡಮಲೆ ರವಿ, ಬೀರಮಾನಹಳ್ಳಿ ಆ೦ಜಿನಪ್ಪ, ಅಂಬೇಡ್ಕರ್ ನಗರ ಮುನಿಯಪ್ಪ, ವಿ.ಎಂ. ಸಂಘರ್ಷ, ಫೋಟೋಗ್ರಾಫರ್ ಸುಬ್ರಮಣಿ ಮುಂತಾದವರು ಭಾಗವಹಿಸಿದ್ದರು.

Similar News