×
Ad

ಹಾಸನ | ಕೊರಿಯರ್​​ ಮೂಲಕ ಬಂದಿದ್ದ ಮಿಕ್ಸಿ ಸ್ಫೋಟ; ಅಂಗಡಿ ಮಾಲಕನಿಗೆ ಗಂಭೀರ ಗಾಯ

ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ

Update: 2022-12-26 22:37 IST

ಹಾಸನ, ಡಿ, 26: ಕೊರಿಯರ್​​ ಮೂಲಕ ಬಂದಿದ್ದ ಹೊಸ ಮಿಕ್ಸರ್ ಒಂದು ​ಸ್ಫೋಟಗೊಂಡಿದ್ದು, ಅಂಗಡಿ  ಮಾಲಕ ಗಂಭೀರ ಗಾಯಗೊಂಡಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದಿದೆ.

ಹಾಸನದ ಕುವೆಂಪುನಗರದ 16ನೇ ಕ್ರಾಸ್‍ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಡಿಟಿಡಿಸಿ ಅಂಗಡಿಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯು, ಮಿಕ್ಸಿ, ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲಕನಿಗೆ ವಾಪಸ್ ನೀಡಿದ್ದ ಎನ್ನಲಾಗಿದೆ. ಅಂಗಡಿ ಮಾಲಕ ಶಶಿ ಮಿಕ್ಸಿಯನ್ನು ಪರಿಶೀಲನೆ ಮಾಡುವಾಗ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.

ಸ್ಫೋಟದ ತೀವ್ರತೆಗೆ ಅಂಗಡಿ ಮಾಲಕ ಶಶಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

''ಗಾಯಾಳುಗೆ ಯಾವುದೇ ಪ್ರಾಣಾಪಾಯ ಇಲ್ಲ''

ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತೆ, ಕೊರಿಯರ್ ಎಲ್ಲಿಂದ ಬಂತು ಎನ್ನೋ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗೋದು ಬೇಡ

ಎಸ್ಪಿ- ಹರಿರಾಮ್ ಶಂಕರ್

Similar News