ಸಾಗರ | ಆನಂದಪುರಂ ಸುತ್ತಮುತ್ತ ವಾಂತಿಬೇಧಿ; 30ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು

Update: 2022-12-26 17:37 GMT

ಸಾಗರ, ಡಿ.26 : ತಾಲೂಕಿನ ಆನಂದಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಂತಿಬೇಧಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾಂತಿಬೇಧಿಯಿಂದ ಅ್ವಸ್ಥಗೊಂಡಿದ್ದ 30ಕ್ಕೂ ಹೆಚ್ಚು ಜನರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಾರ್ವಜನಿಕರು ಮನೆಯಲ್ಲಿ ಕುದಿಸಿ ಆರಿಸಿದ ನೀರು ಉಪಯೋಗಿಸುವ ಜೊತೆಗೆ ಸ್ವಚ್ಚತೆಯನ್ನು ಕಾಯ್ದುಕೊಳ್ಳಲು ವೈದ್ಯರು ಸಲಹೆ ನೀಡಿದ್ದು, ವಾಂತಿಬೇಧಿ ಕಾಣಿಸಿಕೊಂಡವರು ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಲು ಸಲಹೆ ನೀಡಿದ್ದಾರೆ. 

ಈ ಕುರಿತು ಮಾತನಾಡಿರುವ ವೈದ್ಯ ಡಾ. ಕಾಂತೇಶ್ ಜೆ. ಕುಮಾರ್, ಬೆಳಿಗ್ಗೆಯಿಂದ ಸುಮಾರು  ಮಕ್ಕಳು ಸೇರಿದಂತೆ ಹಲವರು ವಾಂತಿಬೇಧಿ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಗಂಭೀರ ಸ್ವರೂಪ ಕಾಣಿಸಿಕೊಂಡಿಲ್ಲ. ರವಿವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ್ದರಿಂದ ಫುಡ್ ಪಾಯಿಸನ್ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಲಾಗಿದ್ದು,  ಶುದ್ಧವಾದ ನೀರು ಪೂರೈಕೆ ಮಾಡಲು ತಿಳಿಸಲಾಗಿದೆ. ಸಾರ್ವಜನಿಕರು ಸಹ ಸ್ವಚ್ಚತೆ ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

Similar News