ಜಗ್ಗಿ ವಾಸುದೇವ್‍ನನ್ನು ಕೊಯಮತ್ತೂರಿನಿಂದ ಓಡಿಸಿದ್ದಾರೆ: ಬಿ.ಕೆ.ಹರಿಪ್ರಸಾದ್

Update: 2022-12-26 17:39 GMT

ಬೆಳಗಾವಿ, (ಸುವರ್ಣವಿಧಾನಸೌಧ) ಡಿ.26: ‘ಈಶಾ ಫೌಂಡೇಷನ್’ ಸಂಸ್ಥಾಪಕ ಜಗ್ಗಿ ವಾಸುದೇವ್‍ನನ್ನು ತಮಿಳುನಾಡಿನ ಕೊಯಿಮತ್ತೂರಿನಿಂದ ಉಗಿದು ಓಡಿಸಿದ್ದಾರೆ ಎಂದು ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಸೋಮವಾರ ಪರಿಷತ್ತಿನಲ್ಲಿ ಭೋಜನ ವಿರಾಮದ ಬಳಿಕ ನಡೆದ ‘ಕರ್ನಾಟಕ ಭೂ ಕಂದಾಯ(ಎರಡನೇ ತಿದ್ದುಪಡಿ) ವಿಧೇಯಕ-2022 ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನೀತಿ ನಿಯಮ ಉಲ್ಲಂಘಿಸಿ ಅಪಾರ ಪ್ರಮಾಣವನ್ನು ಭೂಮಿಯನ್ನು ಜಗ್ಗಿ ವಾಸುದೇವ್‍ಗೆ ನೀಡಿದ್ದಾರೆ. ಅಲ್ಲದೆ, 109 ಸೆಕ್ಷನ್ ಉಲ್ಲಂಘನೆ ಮಾಡಿ ನೀಡಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ ಪಕ್ಷ ಬಿಜೆಪಿಯ ಸದಸ್ಯರೊಬ್ಬರು, ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ ಎಂದು ಕೇಳಿದರು. ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಅವರು, 'ಆತ ಜಗ್ಗಿ ವಾಸುದೇವ್‍ನನ್ನು ಕೊಯಮತ್ತೂರಿನಿಂದ ಉಗಿದು ಓಡಿಸಿದ್ದಾರೆ.ಇದಕ್ಕಿಂತ ದಾಖಲೆ ಬೇಕೇ?' ಎಂದರು.

Similar News