×
Ad

ಹೊಸಪೇಟೆ | ಕಿಡಿಗೇಡಿಗಳಿಂದ ಖಬರಸ್ತಾನದಲ್ಲಿದ್ದ ನೂರಕ್ಕೂ ಹೆಚ್ಚು ಸಮಾಧಿ ನೆಲಸಮ: ಪ್ರಕರಣ ದಾಖಲು

Update: 2022-12-27 11:30 IST

ಹೊಸಪೇಟೆ, ಡಿ.27: ತಾಲೂಕಿನ ಕೊಂಡನಾಯಕನಹಳ್ಳಿ ಬಳಿ ಖಬರಸ್ತಾನದಲ್ಲಿದ್ದ ನೂರಕ್ಕೂ ಹೆಚ್ಚು ಸಮಾಧಿಗಳನ್ನು ಕಿಡಿಗೇಡಿಗಳು ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಅಡಿಯಲ್ಲಿ ಬರುವ ಮುಸ್ಲಿಮ್ ಖಬರಸ್ತಾನ (ಸುನ್ನಿ) ಆಡಿಷನಲ್‌ ಪ್ರಾಪರ್ಟಿ ಆಫ್ ಮಸೀದಿ-ಇ-ಫಿರ್ದೌಸ್ ನ ಅಧ್ಯಕ್ಷ ಮಹಮ್ಮದ್ ಗೌಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಮಹಮ್ಮದ್ ಗೌಸ್ ಅವರ ದೂರಿನನ್ವಯ ಸೋಮವಾರ ಪ್ರಕರಣ ದಾಖಲಾಗಿದೆ. 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು,  ಸಮಾಧಿಗಳನ್ನು ನೆಲಸಮಗೊಳಿಸಿರುವ ಕಿಡಿಗೇಡಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. 

Similar News