×
Ad

ತರೀಕೆರೆ: ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ವ್ಯಕ್ತಿ !

Update: 2022-12-28 09:31 IST

ಚಿಕ್ಕಮಗಳೂರು, ಡಿ.28: ವ್ಯಕ್ತಿಯೋರ್ವ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಘಟನೆ ತರೀಕೆರೆಯಲ್ಲಿ ನಡೆದಿದೆ.

ಕೊಲ್ಕತ್ತಾ ಮೂಲದ ಆಸಿಫ್ ಎಂಬವರು ತನ್ನ ಊರಿಗೆ ಹೋಗಲು ರೈಲ್ವೆ ನಿಲ್ದಾಣದ ಬಳಿ ಬಂದಿದ್ದರು. ಈ ವೇಳೆ ಅವರಿಗೆ ಕೊಳಕ ಮಂಡಲ ಹಾವು ಕಚ್ಚಿದೆ. ಕೂಡಲೇ ಹಿಡಿದ ಆಸಿಫ್ ಅದನ್ನು ಕೈಯಲ್ಲಿ ಹಿಡಿದುಕೊಂಡೇ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಇದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಒಮ್ಮೆ ಹೌಹಾರಿದರೂ, ಬಳಿಕ ಆಸಿಫ್ ಅವರಿಗೆ ಚಿಕಿತ್ಸೆ ನೀಡಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Similar News