×
Ad

ಟ್ರಾಫಿಕ್ ಜಾಮ್: ಬೈಕ್ ನಲ್ಲಿ ಸುವರ್ಣ ಸೌಧಕ್ಕೆ ಆಗಮಿಸಿದ ಸಚಿವ ಮುರುಗೇಶ್ ನಿರಾಣಿ

Update: 2022-12-28 10:26 IST

ಬೆಳಗಾವಿ, ಡಿ.28: ವಿಧಾನ ಮಂಡಲ ಅಧಿವೇಶನಕ್ಕೆ ತೆರಳುವ ವೇಳೆ ದಾರಿಮಧ್ಯೆ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬೈಕ್ ನಲ್ಲೇ ಸಹಸವಾರರಾಗಿ ಸುವರ್ಣ ವಿಧಾನಸೌಧ ತಲುಪಿದ ಪ್ರಸಂಗ ನಡೆಯಿತು.

ಸಚಿವ ಮುರುಗೇಶ್ ನಿರಾಣಿ ಅವರು ಸುವರ್ಣ ವಿಧಾನಸೌಧಕ್ಕೆ ಹೊರಟಿದ್ದರು. ಮದ್ಯದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಬೇರೊಬ್ಬರೊಂದಿಗೆ ಬೈಕ್ ನಲ್ಲಿ ಸಹಸವಾರರಾಗಿ ಅವರು ಸುವರ್ಣ ವಿಧಾನಸೌಧವನ್ನು ತಲುಪಿದರು.

Similar News