5 ಲಕ್ಷ ಅನರ್ಹರ ಮಾಸಾಶನ ರದ್ದು: ಸಚಿವ ಆರ್. ಅಶೋಕ್
Update: 2022-12-28 21:06 IST
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.28: ಮಾಸಾಶನ ಯೋಜನೆಯಲ್ಲಿ ಎರಡು ವರ್ಷದಲ್ಲಿ 5 ಲಕ್ಷ ಅನರ್ಹರು ಪತ್ತೆಯಾಗಿದ್ದು, ಅವರನ್ನು ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರದಲ್ಲಿ ಸದಸ್ಯ ಶಶೀಲ್ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ವೃದ್ಧಾಪ್ಯ, ವಿಧವಾವೇತನ, ವಿಶೇಷ ಚೇತನರು ಸೇರಿ ಹಲವು ವರ್ಗಗಳಿಗೆ ವಿವಿಧ ಯೋಜನೆಗಳಡಿ ಸುಮಾರು 9 ಸಾವಿರ ಕೋಟಿ ರೂ.ಗಳಷ್ಟು ಮಾಶಾಸನ ನೀಡುತ್ತಿದೆ. ಈ ಮೊದಲು ಅಂಚೆ ಇಲಾಖೆ ಸಿಬ್ಬಂದಿಗಳ ಮೂಲಕ ಮಾಸಾಶನ ತಲುಪಿಸಲಾಗುತ್ತಿತ್ತು. ಈಗ ಆ ಪದ್ಧತಿಯನ್ನು ಬದಲಾವಣೆ ಮಾಡಲಾಗಿದೆ ಎಂದರು.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ತಿಂಗಳ 25ರಿಂದ ಹಣ ವರ್ಗಾವಣೆ ಮಾಡಲಾಗುತ್ತಿದೆ.ಎಂಟು ತಿಂಗಳ ಒಳಗೆ ಖಾತೆಯಲ್ಲಿ ವಹಿವಾಟು ನಡೆಯದ್ದಿದ್ದರೆ ಅದನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.