×
Ad

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಭೇಟಿ

Update: 2022-12-29 11:05 IST

ಬೆಳಗಾವಿ, ಡಿ.29:  ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸಚಿವ ಆರಗ ಜ್ಞಾನೇಂದ್ರರವರು ಇಂದು ದಿಢೀರ್ ಭೇಟಿ ಪರಿಶೀಲನೆ ನಡೆಸಿದರು. 

ಜೈಲಿನೊಳಗೆ ಮೊಬೈಲ್, ಗಾಂಜಾ ಹಾಗೂ ಮಾದಕ ವಸ್ತುಗಳ ಅಕ್ರಮ ಸರಬರಾಜು ತಡೆಯಲು ಜೈಲು ಸಿಬ್ಬಂದಿ ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ಹಿಂಡಲಾಗ ಜೈಲಿಗೆ ಭೇಟಿ ಕೊಟ್ಟು ಬಂದಿದ್ದೇನೆ. ಅಲ್ಲಿಯ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿದ್ದೇನೆ, 800 ಹೆಚ್ಚು ಜೈಲ್ ಖೈದಿಗಳು ಅಲ್ಲಿ ಇದ್ದಾರೆ. ಅವರೆಲ್ಲರ ಸೌಲಭ್ಯ ಮತ್ತು ನ್ಯೂನ್ಯತೆ ಬಗ್ಗೆ  ಪರೀಶಿಲಿಸಿದ್ದೇನೆ. ಸಾರ್ವಕರ್ ಅವರು ಹಿಂಡಲಾಗ ಜೈಲಿನಲ್ಲಿದ್ದರು. ಅವರು ಇದ್ದ ಸೇಲ್ ಗೂ ಭೇಟಿ ಕೊಟ್ಟು ಬಂದಿದ್ದೇನೆ' ಎಂದರು. 

'ಉತ್ತರ ಕರ್ನಾಟಕದ ಬಗ್ಗೆ ಯಾವುದೇ ರೀತಿ ತಾರತಮ್ಯ ಮಾಡುವುದಿಲ್ಲ. ಅದರ ಅಭಿವೃದ್ಧಿ ಬಗ್ಗೆ ನಿನ್ನೆಯೂ ಚರ್ಚೆ ಮಾಡಿದ್ದೇವೆ. ನಮ್ಮ ಸರ್ಕಾರ ಉ .ಕ ಅಭಿವೃದ್ಧಿ ಗೆ ಬದ್ಧವಾಗಿದೆ' ಎಂದು ಇದೇ ವೇಳೆ ತಿಳಿಸಿದರು.  

Similar News