3 ತಿಂಗಳ ಕಾರ್ಯಾಚರಣೆ; KRS ಬೃಂದಾವನದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ
Update: 2022-12-29 14:56 IST
ಶ್ರೀರಂಗಪಟ್ಟಣ, ಡಿ.29: ತಾಲೂಕಿನ ಕೆಆರ್ ಎಸ್ (KrishnaRajaSagara Dam) ಬೃಂದಾವನದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಗುರುವಾರ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ.
ಕಳೆದ ಮೂರು ತಿಂಗಳಿನಿಂದ ಬೃಂದಾವನದ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದು ಪ್ರವಾಸಿಗರು ಮತ್ತು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಗುರುವಾರ ಬೆಳಗಿನ ಜಾವ ಬೃಂದಾವನ ಗಾರ್ಡನ್ ಬಳಿಯ ಉತ್ತರದ ಗೇಟ್‌ನ ವಿಸಿ ನಾಲೆ ಹತ್ತಿರ ಕಳೆದ ಮೂರು ತಿಂಗಳ ಹಿ೦ದೆ ಇರಿಸಿದ್ದ ಬೋನ್ಗೆ ಚಿರತೆ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಚಿರತೆ ನಾಲ್ಕು ಬಾರಿ ಕಾಣಿಸಿಕೊಂಡಿತ್ತು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮ ಕಳೆದ ನವೆಂಬರ್ 6 ರಿಂದ ಸುಮಾರು ಒಂದು ತಿಂಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.
ಇದನ್ನೂ ಓದಿ: KRS ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಲ್ಲಿ ಆತಂಕ