ನಿಖತ್‌ಝರೀನ್, ಪ್ರಿಯಾಸಿಂಗ್‌ಗೆ ಅಭಿನಂದನೆ ಸಲ್ಲಿಸಲು ಮರೆತ ಪರಿಷತ್

Update: 2022-12-30 03:39 GMT

ಬೆಳಗಾವಿ, (ಸುವರ್ಣವಿಧಾನಸೌಧ) ಡಿ.29:2022ನೇ ಸಾಲಿನ ಕ್ರೀಡಾ ಲೋಕದಲ್ಲಿ ಭಾರತ ಹಾಗೂ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಕ್ರೀಡಾಪಟುಗಳಿಗೆ ಪರಿಷತ್‌ನಲ್ಲಿ ಸಲ್ಲಿಸಿದ ಅಭಿನಂದನಾ ನಿರ್ಣಯದಲ್ಲಿ, ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಗೆದ್ದ ಭಾರತ ನಿಖತ್‌ಝರೀನ್ ಹಾಗೂ 39ನೇ ಅಂತರ್‌ರಾಷ್ಟ್ರೀಯ ಮಹಿಳಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನಗೆದ್ದ ಪ್ರಿಯಾಸಿಂಗ್ ಮೇಘವಾಲ್‌ಅವರನ್ನು ಕಡೆಗಣಿಸಲಾಗಿದೆ.

ಗುರುವಾರ ಪರಿಷತ್‌ನಲ್ಲಿ ಭೋಜನ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ.ರಾಥೋಡ್ ಅವರು ನಿಯಮ 31-ಎ ಅಡಿ ಅಭಿನಂದನೆ ಸೂಚನಾ ನಿರ್ಣಯ ಮಂಡಿಸಿದರು.

ಅನಂತರ, ಅವರು 2022ರ ಸಾಲಿನಲ್ಲಿ ಕ್ರೀಡಾ ಲೋಕದಲ್ಲಿ ಭಾರತ ಹಾಗೂ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಕ್ರೀಡಾಪಟುಗಳಿಗೆ ಅಭಿನಂದಿಸಿ, ಇಂಗ್ಲೆಂಡ್ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಸಾಧನೆ ಮಾಡಿದೆ.ಇದರ ಫಲವಾಗಿ ದೇಶವೂ 4ನೇ ಸ್ಥಾನ ಪಡೆದುಕೊಂಡಿದ್ದು, 61 ಪದಕಗಳನ್ನು ತನ್ನಾಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಬ್ಯಾಡ್ಮಿಂಟ್‌ನಲ್ಲಿ ಪಿ.ವಿ.ಸಿಂಧೂ, ಲಕ್ಷ್ಮ್ಮಣ್ ಸೇನ್, ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಚಿನ್ನ ಗೆದ್ದಿದ್ದಾರೆ. ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋ ಒಲಂಪಿಕ್ ಕ್ರೀಡೆಯಲ್ಲಿ ಬೆಳ್ಳಿ ಪದಕ, ಮೇಡಿನ್ ಥಾಮಸ್ ಕಪ್‌ನ ಬ್ಯಾಡ್ಮಿಟನ್ ಆಟದಲ್ಲಿ ಕಿಡಂಬಿ ಶ್ರೀಕಾಂತ್, ರಾಂಕಿರೆಡ್ಡಿ, ಶರತ್‌ಕಮಲ್ ಅಚಂತಾ ಅವರಿಗೆ ಖೇಲ್‌ರತ್ನ ಪ್ರಶಸ್ತಿ ಪ್ರದಾನಿಸಲಾಗಿದೆ ಎಂದು ಹೇಳಿದರು.

ಇನ್ನೂ, ಏಷ್ಯನ್ ಚಾಂಪಿಯನ್ ಶಿಪ್ ಏಲ್ಡೋಸ್ ಪೌಲ್ ಅವರಿಗೆ ಚಿನ್ನದ ಪದಕ, ಪ್ರಾನ್ನೋಯಿ ಅವರಿಗೆಕಂಚಿನ ಪದಕ, ಏಕಲವ್ಯ ಪ್ರಶಸ್ತಿ ಕೆ.ಎಸ್.ಜೀವನ್ (ಅಥ್ಲೇಟಿಕ್), ನೀತಿನ್(ನೆಟ್‌ಬಾಲ್), ಎಸ್ಪಿ ಲಿಖಿತಾ(ಈಜು), ಕರಣ್ ನಾಯರ್(ಕ್ರಿಕೆಟ್), ಅನರ್ಯ ಮಂಜುನಾಥ್(ಟೇಬಲ್ ಟೆನ್ನಿಸ್), ಲೋಕಾಮುದ್ರಾ ತಿಮ್ಮಯ್ಯ(ಬಾಸ್ಕೆಟ್ ಬಾಲ್).

ಅಶ್ವಿನಿ ಭಟ್(ಬ್ಯಾಡ್ಮಿಟನ್), ಜಿ.ತರುಣ್ ಕೃಷ್ಣ ಪ್ರಸಾದ್(ರೋಯಿಂಗ್), ದಾನಮ್ಮ ಜಮಖಂಡಿ(ಸೈಕಲಿಂಗ್), ಅಶ್ವಿನಿ ರೈ(ವಾಲಿಬಾಲ್), ಎಂ.ಎನ್.ವಸುಂಧಾರಾ(ಜೋಡೋ), ಪ್ರಧಾನ್ ಸೋಮಣ್ಣ(ಹಾಕಿ), ಪ್ರಶಾಂತ್‌ಕುಮಾರ್ ರೈ(ಕಬ್ಬಡಿ), ವಿ.ರಾಧಾ(ಪ್ಯಾರಾಅಥ್ಲೆಂಟಿಕ್), ಮುನೀರ್ ಬಾಷಾ(ಖೋಖೋ), ಮಹಿಳಾ ಕ್ರಿಕೆಟ್ ಟಿ-20 ಪಂದ್ಯದಲ್ಲಿ ರಾಜ್ಯದ ಎಡಗೈ ಸ್ಪಿನ್ನರ್ ರಾಜೇಶ್ವರಿಗಾಯಕ್‌ವಾಡ್.

ಕ್ರಿಕೆಟ್‌ಆಟಗಾರರಾದ ಕೆ.ಎಲ್.ರಾಹುಲ್ ಮನಿಷ್ ಪಾಂಡೆ, ಕೃಷ್ಣಪ್ಪಗೌತಮ್, ಪ್ರವೀನ್‌ದುಬೆ, ಅಭಿನವ್ ಮನೋಹರ್, ಮಾಯಾಂಕ್‌ಅಗರ್‌ವಾಲ್, ದೇವದತ್ ಪಡಿಕಲ್, ಕೆ.ಸಿ.ಕರಿಯಪ್ಪ, ಕರುಣ್ ನಾಯರ್, ಶ್ರೇಯಸ್‌ಗೋಪಾಲ್, ರಾಬಿನ್ ಉತ್ತಪ್ಪ, ಲವನೀತ್ ಸಿಸೋಡಿಯಾ, ಜಗದೀಶ್ ಸುಜೀತ್.

ಕಬ್ಬಡಿ ಪಟುಗಳಾದ ಸುಕೇಶ್ ಹೆಗ್ಡೆ, ಜೀವ, ಪ್ರಶಾಂತ್‌ರೈ ಸೇರಿದಂತೆ ಹಲವರನ್ನು ಅಭಿನಂದಿಸಿ ಕ್ರೀಡಾಪಟುಗಳಿಗೆ ಅಭಿನಂದನಾ ನಿರ್ಣಯ ಮಂಡಿಸಿದರು. ಅನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರಕಾರ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಬದ್ಧವಾಗಿದೆ. ಹೀಗಾಗಿಯೇ, ನಾವು ಕ್ರೀಡಾಪಟುಗಳ ಬಹುಮಾನ ಮೊತ್ತ ಹೆಚ್ಚಿಸಿದ್ದೇವೆ. ಜೊತೆಗೆ ಸರಕಾರಿ ಉದ್ಯೋಗದಲ್ಲಿ  ಕ್ರೀಡಾಪಟುಗಳಿಗೆ ಮೀಸಲಾತಿ ನೀಡಿದ್ದೇವೆ ಎಂದು ತಿಳಿಸಿದರು. ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು, ಧ್ವನಿಮತದ ಮೂಲಕ ಅಭಿನಂದನಾ ನಿರ್ಣಯ ಅಂಗೀಕರಿಸಿದರು.

ಯಾರು ನಿಖತ್‌ಝರೀನ್?

ವಿಶ್ವ ಮಹಿಳಾ ಬಾಕ್ಸಿಂಗ್‌ಚಾಂಪಿಯನ್ ಶಿಫ್‌ನಲ್ಲಿ ಫೈನಲ್‌ನಲ್ಲಿ ಗೆದ್ದು ನಿಖತ್‌ಝರೀನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಮೇನಲ್ಲಿ ನಡೆದಿದ್ದ 52 ಕೆಜಿ ಬಾಕ್ಸಿಂಗ್ ಚಾಂಪಿಯನ್ ಶಿಫ್‌ನಲ್ಲಿ ಅವರು ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು.

ಚಿನ್ನಗೆದ್ದ ಪ್ರಿಯಾಸಿಂಗ್

ರಾಜಸ್ಥಾನದ ಮೊದಲ ಮಹಿಳಾ ಬಾಡಿ ಬಿಲ್ಡರ್ ಪ್ರಿಯಾ ಸಿಂಗ್ ಅವರು ಇತ್ತೀಚೆಗೆ ಥಾಯ್ಲೆಂಡ್‌ನ ಪಟ್ಟಾಯಂನಲ್ಲಿ ನಡೆದ 39ನೇ ಅಂತರ್‌ರಾಷ್ಟ್ರೀಯ ಮಹಿಳಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಈ ಹಿಂದೆ ಸಹ ಅವರು ಮೂರು ಬಾರಿಗೆ ‘ಮಿಸ್ ರಾಜಸ್ಥಾನಿ ಟೈಟಲ್’ಅನ್ನು ತಮ್ಮದಾಗಿಸಿ ಕೊಂಡಿದ್ದಾರೆ.

Similar News