'ರೋಗ ಪೀಡಿತ ಗೋವುಗಳಿಗೆ ಲಸಿಕೆ ನೀಡದ ಬಿಜೆಪಿ ಸರಕಾರ': ಕುಮಾರಸ್ವಾಮಿ ಕಾರನ್ನು ಅಡ್ಡಗಟ್ಟಿ ಮನವಿ ಸಲ್ಲಿಸಿದ ರೈತ
ಬೆಂಗಳೂರು, ಡಿ. 30: ರೋಗ ಪೀಡಿತ ಗೋವುಗಳಿಗೆ ರಾಜ್ಯ ಬಿಜೆಪಿ ಸರಕಾರದಿಂದ ಲಸಿಕೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಣಿಗಲ್ ನ ಹನುಮಾಪುರ ಗ್ರಾಮದ ಯುವ ರೈತ ಗಿರೀಶ್ ತನ್ನ ಹಸುವಿನೊಂದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಕಾರನ್ನು ಅಡ್ಡಗಟ್ಟಿ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಿಜೆಪಿ ಸರಕಾರ ಕೇವಲ ಬರೀ ಬಾಯಿ ಮಾತಿನಲ್ಲಿ ಗೋವಿನ ಹೆಸರು ಹೇಳುತ್ತಿದೆಯೇ ವಿನಾಃ ಗೋವುಗಳಿಗಾಗಿ ಏನೂ ಮಾಡುತ್ತಿಲ್ಲ. ಲಸಿಕೆ, ಚಿಕಿತ್ಸೆ ನೀಡುತ್ತಿಲ್ಲ. ನಮ್ಮ ಕಣ್ಮುಂದೆಯೇ ಗೋವುಗಳು ಸಾಯುತ್ತಿವೆ ಎಂದು ಆ ಯುವಕ ಹೇಳಿದ ಎಂದು ತಿಳಿಸಿದ್ದಾರೆ.
ರೋಗಪೀಡಿತ ಗೋವುಗಳಿಗೆ ರಾಜ್ಯ @BJP4Karnataka ಸರಕಾರದಿಂದ ಲಸಿಕೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕುಣಿಗಲ್ ಕ್ಷೇತ್ರದ ಹನುಮಾಪುರ ಗ್ರಾಮದ ಯುವ ರೈತ ಗಿರೀಶ್ ತನ್ನ ಹಸುವಿನೊಂದಿಗೆ ಇಂದು ನನ್ನ ಕಾರನ್ನು ಅಡ್ಡಗಟ್ಟಿ ಮನವಿ ಸಲ್ಲಿಸಿದರು.1/3 pic.twitter.com/Qfjm4zdqtI
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 30, 2022