×
Ad

ಅಮಿತ್ ಶಾ ಅಲ್ಲ, ನರೇಂದ್ರ ಮೋದಿಯವರೇ ಬಂದ್ರೂ ಇಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ

Update: 2022-12-30 20:25 IST

ದಾವಣಗೆರೆ.ಡಿ.30: 'ಅಮಿತ್ ಶಾ ಬಳಿ ಏನು ಮಂತ್ರದಂಡ ಇದೆಯಾ? ಅವರು ಎಷ್ಟುಬಾರಿ ಬಂದ್ರು ಅಷ್ಟೇ. ಅವರ ಜಾದೂ ಇಲ್ಲೇನೂ ನಡೆಯಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರೇ ಬಂದ್ರೂ ಇಲ್ಲಿ ಬಿಜೆಪಿ ಗೆಲ್ಲಲ್ಲ. ಅವರು ಬಂದು ಇಲ್ಲೇನು ಮಾಯಾ ಮಂತ್ರ ಮಾಡುತ್ತಾರಾ? ಚುನಾವಣಾ ಸಂದರ್ಭದಲ್ಲಿ ಪಶ್ಚಿಮ ಬಂಗಾಳ,ಹಿಮಾಚಲ ಪ್ರದೇಶದಲ್ಲಿಯೇ ಠಿಕಾಣಿ ಹಾಕಿದ್ದರು. ಏನಾಯಿತು ? ಅವರ ಹತ್ರ ಮಾಯಾದಂಡ ಇದೆಯಾ ಎಂದು ಪ್ರಶ್ನಿಸಿದರು.

ಕೇಂದ್ರ ಮಂತ್ರಿ ಅಂತ ಕರೆದಿದ್ದಾರೆ ಬಂದಿದ್ದಾರೆ ಅಷ್ಟೇ. ಅವರು ಬಂದಾಕ್ಷಣ ಗೆದ್ದು ಬಿಡ್ತಾರಾ ? ನರೇಂದ್ರ ಮೋದಿಯವರು ಬಂದ್ರು ಅವರು ಇಲ್ಲ ಗೆಲ್ಲಲ್ಲ ಎಂದರು.

ಅಭಿಮಾನಿಗಳಿಂದ ಮುಂದಿನ ಮುಖ್ಯಮಂತ್ರಿ ಘೋಷಣೆ: ಸಿದ್ದರಾಮಯ್ಯನವರು ಹೆಲೆಕಾಪ್ಟರ್ ನಿಂದ ಇಳಿಯುತ್ತಿದ್ದ ಹಾಗೆ ಚಾಮುಂಡೇಶ್ವರಿ ತಾಯಿ ಸುಪುತ್ರ , ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಅವರನ್ನು ಬರಮಾಡಿಕೊಂಡರು.

Similar News