×
Ad

ಭ್ರಷ್ಟ ಬಿಜೆಪಿಯ 40% ಕಮಿಷನ್ ಲೂಟಿಗೆ ಮತ್ತೊಂದು ಬಲಿ: ಕಾಂಗ್ರೆಸ್ ಆರೋಪ

ತುಮಕೂರಿನ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ

Update: 2022-12-31 11:42 IST

ತುಮಕೂರು, ಡಿ.31: ದೇವರಾಯನದುರ್ಗದ ಪ್ರವಾಸಿ ಮಂದಿರದಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರಕಾರ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ತುಮಕೂರಿನ ಗುತ್ತಿಗೆದಾರ ಟಿ.ಎನ್ ಪ್ರಸಾದ್ ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ' ಎಂದು ಆರೋಪಿಸಿದೆ. 

ಇದನ್ನೂ ಓದಿ: ತುಮಕೂರು: ಸಾಲಬಾಧೆ ತಾಳಲಾರದೆ ಗುತ್ತಿಗೆದಾರ ಆತ್ಮಹತ್ಯೆ

''ಭ್ರಷ್ಟ ಬಿಜೆಪಿಯ 40% ಕಮಿಷನ್ ಲೂಟಿಗೆ ಮತ್ತೊಂದು ಬಲಿ. ಸಾಲ ಮಾಡಿ ಕಾಮಗಾರಿಗೆ ಹಣ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಅಮಿತ್ ಶಾ ಅವರೇ, ರಾಜ್ಯದ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವ, 40% ಕಮಿಷನ್ ವಿರುದ್ದ ಕ್ರಮ ಕೈಗೊಳ್ಳುವ ಧಮ್ಮು, ತಾಕತ್ತು ಇದೆಯೇ?'' ಎಂದು ಪ್ರಶ್ನೆ ಮಾಡಿದೆ. 

ಶುಕ್ರವಾರ ತುಮಕೂರಿನ ದೇವರಾಯನದುರ್ಗದ ಪ್ರವಾಸಿ ಮಂದಿರದಲ್ಲಿ ಗುತ್ತಿಗೆದಾರ ಟಿ.ಎನ್ ಪ್ರಸಾದ್ ಅವರ ಮೃತ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

Similar News