ಕರ್ನಾಟಕ ಬಿಜೆಪಿಯ 'ಫ್ಯಾಮಿಲಿ ಪಾಲಿಟಿಕ್ಸ್' ಪಟ್ಟಿ ಬಿಡುಗಡೆಗೊಳಿಸಿ ಅಮಿತ್ ಶಾಗೆ ತಿರುಗೇಟು ನೀಡಿದ ಎಚ್ ಡಿಕೆ

''ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ...''

Update: 2022-12-31 08:46 GMT

ಬೆಂಗಳೂರು, ಡಿ.31: 'ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಟುಂಬದ ಎಟಿಎಂ ಆಗುತ್ತದೆ' ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಕರ್ನಾಟಕ ಬಿಜೆಪಿಯ ಕುಟುಂಬ ರಾಜಕಾರಣದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. 

ಶನಿವಾರ ಟ್ವೀಟ್ ಮಾಡಿರುವ  ಎಚ್ ಡಿಕೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ 15 ಮಂದಿ ಬಿಜೆಪಿ ನಾಯಕರ ಹೆಸರನ್ನು ಪ್ರಕಟಿಸಿದ್ದಾರೆ. 

1. ಯಡಿಯೂರಪ್ಪ & ಸನ್ಸ್ 2. ರವಿಸುಬ್ರಮಣ್ಯ - ತೇಜಸ್ವಿ ಸೂರ್ಯ 3. ಅಶೋಕ್ -ರವಿ 4. ವಿ.ಸೋಮಣ್ಣ & ಸನ್ 5. ಅರವಿಂದ ಲಿಂಬಾವಳಿ -ರಘು 6. ಎಸ್.ಆರ್.ವಿಶ್ವನಾಥ್ - ವಾಣಿ ವಿಶ್ವನಾಥ್ 7. ಜಗದೀಶ್ ಶೆಟ್ಟರ್ - ಪ್ರದೀಪ್ ಶೆಟ್ಟರ್ 8. ಮುರುಗೇಶ್ ನಿರಾಣಿ - ಹನುಮಂತ ನಿರಾಣಿ, 9. ಜಿ ಎಸ್ ಬಸವರಾಜು - ಜ್ಯೋತಿ ಗಣೇಶ್ 10. ಜಾರಕಿಹೊಳಿ & ಬ್ರದರ್ 11. ಜೊಲ್ಲೆ & ಜೊಲ್ಲೆ 12. ಅಂಗಡಿ ಕುಟುಂಬ 13. ಉದಾಸಿ ಕುಟುಂಬ 14. ಶ್ರೀರಾಮುಲು ಕುಟುಂಬ 15. ರೆಡ್ಡಿ & ರೆಡ್ಡಿ ಅವರ ಹೆಸರನ್ನು ಪ್ರಕಟಿಸಿ ಟ್ವೀಟ್ ಮಾಡಿದ್ದಾರೆ. 

'ಮೇಲಿನ ಈ ಪಟ್ಟಿ ಕೂಡ ಅಪೂರ್ಣ ಪಟ್ಟಿಯೇ. ರಾಷ್ಟ್ರೀಯ ಪಟ್ಟಿ ಬೇಕಿದ್ದರೆ ಹೇಳಿ, ಇದರ ಹತ್ತರಷ್ಟಿದೆ. ಇವತ್ತು ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ. ಎಷ್ಟಾದರೂ ನೀವು ಸ್ವಯಂ ಘೋಷಿತ ಸಾಚಾ ಅಲ್ಲವೇ? ಉತ್ತರ ಹೇಳಿ ಹೋದರೆ ನಾವೂ ಧನ್ಯರಾಗುತ್ತೇವೆ. ಸತ್ಯ ಅಜರಾಮರ, ಅಸತ್ಯ ನಿಮ್ಮ ಹಣೆಬರ. ಸತ್ಯದ ಮುಂದೆ ಧಮ್ಮು ತಾಕತ್ತು ದುರ್ಬಲ' ಎಂದು ಅಮಿತ್ ಶಾ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

Similar News