ಮದ್ದೂರು: ಕಬ್ಬಿನಗದ್ದೆಗೆ ಲಗ್ಗೆ ಇಟ್ಟ ಒಂಟಿ ಸಲಗ

Update: 2022-12-31 17:10 GMT

ಮಂಡ್ಯ, ಡಿ.31: ಮದ್ದೂರು ತಾಲೂಕು ಚಿಕ್ಕರಸಿನಕೆರೆ ಗ್ರಾಮದ ನಿಂಗೇಗೌಡ ಅವರ ಪುತ್ರ ಶಿವಲಿಂಗಯ್ಯ  ಅವರ ಕಬ್ಬಿನಗದ್ದೆಗೆ ಒಂಟಿ ಸಲಗ ಲಗ್ಗೆ ಇಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಶನಿವಾರ ಮುಂಜಾನೆ ರೈತರು ಹೊಲಕ್ಕೆ ಭೇಟಿ ನೀಡಿದ ಸಮಯದಲ್ಲಿ ಒಂಟಿಯಾಗಿದ್ದ ಗಂಡಾನೆ ಕಬ್ಬಿನ ಗದ್ದೆಯಲ್ಲಿರುವುದು ಕಂಡುಬಂದಿದ್ದು, ಸುದ್ದಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳಾದ ಗವಿಯಪ್ಪ ಮತ್ತು ರವಿ ಅವರು ಸಿಬ್ಬಂದಿ ಜತೆ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಹಲಗೂರು ಬಳಿ ಬಾಳೆತೋಟದಲ್ಲಿ ಶುಕ್ರವಾರ ಸಂಜೆವರೆಗೂ ತಂಗಿದ್ದ ಈ ಅನೆ ತಡರಾತ್ರಿ ಸಂಚರಿಸಿ ಚಿಕ್ಕರಸಿನಕೆರೆಯ ಬಯಲಿಗೆ ಬಂದಿರುವುದಾಗಿ ಗವಿಯಪ್ಪ ಮಾಹಿತಿ ನೀಡಿದ್ದಾರೆ. ಅಲಗೂರು ಬಳಿಯ ಅರಣ್ಯದಿಂದ ಈ ಆನೆ ಗುಂಪಿನಿಂದ ಚದುರಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಈ ಸಮಯದಲ್ಲಿ ಅಲುಗೂರಿನ ಭಾಗದಿಂದ ಅನೆಗಳ ಒಂದು ತಂಡ ಶಿಂಷಾನದಿಯ  ಮದ್ದೂರು ಗಡಿವರೆಗೆ ಬರುವುದು ವಾಡಿಕೆ. ಆದರೆ, ಈ ಸಲ ಒಂಟಿ ಸಲಗ ಗುಂಪಿನಿಂದ ಬೆರ್ಪಟ್ಟು ಬಂದಿದೆ ಎಂದು ಅವರು ತಿಳಿಸಿದರು.

ಕಾರ್ಯಾಚರಣೆ: ರಾತ್ರಿ ಪಟಾಕಿ ಸಿಡಿಸಿ, ತಮಟೆ ಸದ್ದು ಹಾಗೂ ಫೈರ್ ದ್ವನಿ ಮೊಳಗಿಸಿ ಆನೆಯನ್ನು ಹೊರಗಟ್ಟುವ ಕಾರ್ಯಚರಣೆ ಮಾಡುವುದಾಗಿ ತಿಳಿಸಿದ ಅವರು, ಇಂತಹ ಸದ್ದು ಕೇಳಿ ಸಹಜವಾಗಿಯೆ ಅನೆ ಬಂದ ಮಾರ್ಗದಲ್ಲೇ ವಾಪಸ್ಸು ತೆರಳಲಿ ಎಂದರು.

ಸಾವರ್ಜನಿಕರು ಗದ್ದಲಮಾಡದೆ, ಗುಂಪುಗೂಡದೆ ಇದ್ದರೆ ಆನೆ ಸುಮ್ಮನಿದ್ದು ರಾತ್ರಿ ವಾಪಸ್ಸಾಗಲಿದೆ.  ಇಲ್ಲಾವಾದಲ್ಲಿ ಆನೆ ಕೆರಳಿ ಓಡಾಡಿ ವಿನಾಕರಣ ಬೆಳೆ ನಾಶ ಹೆಚ್ಚಾಗಲಿದೆ ಅದಕ್ಕಾಗಿ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

Similar News