×
Ad

ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರು ಪಾಲು

Update: 2023-04-01 18:43 IST
Byline : Ashwani

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ಮುಳುಗಿ ಶನಿವಾರ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ. 

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಡಿಫಾರ್ಮಾ ವ್ಯಾಸಂಗ ಮಾಡುತ್ತಿರುವ ಪೂಜಾ(21), ರಾಧಿಕಾ(21),ಮತ್ತು ಇಮ್ರಾನ್ ಖಾನ್(21) ಎಂಬುವರು ಮೃತ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. 

ಕಾಲೇಜಿನ ಆರು ಜನ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯ ಬಳಿ ಬಂದಿದ್ದು, ಈ ವೇಳೆಯಲ್ಲಿ ಜಲಾಶಯ ಹಿಂಭಾಗದಲ್ಲಿ ನೀರಿನ ಆಳ ಕಡಿಮೆ ಇದೆ ಎಂದು ಫೋಟೋ ಸೆರೆಹಿಡಿಯಲು ಪೂಜಾ ನೀರಿನಲ್ಲಿ ಮುಳುಗಿದ್ದಾಳೆ. ಈ ವೇಳೆ ಪೂಜಾಳ ರಕ್ಷಣೆಗೆ ತೆರಳಿದ ರಾಧಿಕಾ ಮತ್ತು ಇಮ್ರಾನ್ ಮೂವರೂ ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. 

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Byline - Ashwani

contributor

Similar News