×
Ad

ಬಾಗಲಕೋಟೆ: ಮಕ್ಕಳ ಕಳ್ಳರೆಂದು ಭಾವಿಸಿ ಕಾರಿಗೆ ಬೆಂಕಿ ಹಚ್ಚಿದ ಜನರು

Update: 2023-04-07 23:00 IST
Byline : Ashwani

ಬಾಗಲಕೋಟೆ: ಮಕ್ಕಳ‌ ಕಳ್ಳರು ಎಂದು ಶಂಕಿಸಿ ಕಾರಿನಲ್ಲಿದ್ದವರನ್ನು ಬೆನ್ನಟ್ಟಿದ ಜನರು ಬಳಿಕ ಥಳಿಸಿ, ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದ ಬಳಿ ಶುಕ್ರವಾರ ವದಿಯಾಗಿದೆ. 

ಬಾಗಲಕೋಟೆ ‌ನಿವಾಸಿಯಾಗಿರುವ ರಾಹುಲ್ ಹಾಗೂ ಕಿರಣ್ ಎಂಬ ಯುವಕರು ಮುಧೋಳ ತಾಲೂಕಿನಲ್ಲಿರುವ ಕೆ ಡಿ ಬುದ್ನಿ‌ ಗ್ರಾಮದಲ್ಲಿರುವ ಸ್ನೇಹಿತನ ಮನೆಗೆ ಹೋಗಿದ್ದಾರೆ. ಈ ವೇಳೆ ಕಾರಿನಲ್ಲಿರುವವರು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ಚಿಕ್ಕೂರು ಗ್ರಾಮದಲ್ಲಿ ತಡೆಯಲು ಯತ್ನಿಸಿದ್ದಾರೆ. ಇದರಿಂದ ಭಯಗೊಂಡ ಯುವಕರ ಮತ್ತಷ್ಟು ವೇಗವಾಗಿ ಕಾರು ಚಲಾಯಿಸಿಕೊಂಡು ಹೂರಟಿದ್ದಾರೆನ್ನಲಾಗಿದೆ.

ಆದರೂ ಬೆನ್ನುಬಿಡಿದ ಜನರು ಕಾರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಲೋಕಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. 

'ಈಗಾಗಲೇ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಯುವಕರು ಬಾಗಲಕೋಟೆ ‌ನಿವಾಸಿಗಳಾಗಿದ್ದು, ಬೇರೆ ರಾಜ್ಯದವರಲ್ಲ. ಮಕ್ಕಳ ಕಳ್ಳರು ಎಂದು ತಪ್ಪು ಭಾವನೆಯಿಂದ ಘಟನೆ ಸಂಭವಿಸಿದೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

'ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಪೊಲೀಸ್ ಅಧಿಕಾರಿ ಗಳು ತಿಳಿಸಿದ್ದಾರೆ. 

Byline - Ashwani

contributor

Similar News