×
Ad

ಗದಗ: ಗಾಳಿಪಟದ ಮಾಂಜಾ ದಾರಕ್ಕೆ ಯುವಕ ಬಲಿ

Update: 2023-06-09 16:52 IST
Byline : Ashwani

ಗದಗ: ಗಾಳಿಪಟಕ್ಕೆ ಬಳಸುವ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಗದಗ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವನಕೆರೆ ಗ್ರಾಮದ ರವಿ(32) ಮೃತ ಯುವಕ ಎಂದು ತಿಳಿದು ಬಂದಿದೆ.

ಗದಗ ನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿ, ಜೂ. 4 ರಂದು ನಗರದ ಡಂಬಳ ನಾಕಾ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಗಾಳಿಪಟ ದಾರ ಕುತ್ತಿಗೆಗೆ ಸಿಲುಕಿದೆ  ಎನ್ನಲಾಗಿದೆ. ತಕ್ಷಣವೇ ಜಿಲ್ಲಾಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಶುಕ್ರವಾರ) ಮೃತಪಟ್ಟಿದ್ದಾರೆ.

Byline - Ashwani

contributor

Similar News